ಭಾರತ, ಏಪ್ರಿಲ್ 19 -- ಇದೇ ಏಪ್ರಿಲ್‌ 25ರಿಂದ ಅಯ್ಯನ ಮನೆ ಎಂಬ ಮಿನಿ ವೆಬ್‌ಸರಣಿ ಬಿಡುಗಡೆಯಾಗಲಿದೆ. ಆರಂಭದಲ್ಲಿ ಇದು ಏಳು ಎಪಿಸೋಡ್‌ನ ವೆಬ್‌ ಸರಣಿ ಎನ್ನಲಾಗಿತ್ತು. ಇತ್ತೀಚೆಗೆ ಶ್ರುತಿ ನಾಯ್ಡು ನೀಡಿದ ಮಾಹಿತಿ ಪ್ರಕಾರ ಇದನ್ನು ಆರು ಎಪಿಸೋಡ್‌ಗಳಿಗೆ ಇಳಿಸಲಾಗಿದೆ. ಈ ವೆಬ್‌ಸರಣಿಗೆ ಶ್ರುತಿ ನಾಯ್ಡು ಬಂಡವಾಳ ಹೂಡಿದ್ದಾರೆ. ಈ ವೆಬ್‌ಸರಣಿಯಲ್ಲಿ ಖುಷಿ ರವಿ, ಅಕ್ಷಯ್‌ ನಾಯಕ್‌, ಮಾನಸಿ ಸುಧೀರ್‌ ಮುಂತಾದವರು ನಟಿಸಿದ್ದಾರೆ. ಇದು ಕ್ರೈಮ್‌ ಥ್ರಿಲ್ಲರ್‌ ಜಾನರ್‌ನ ವೆಬ್‌ಸರಣಿಯಾಗಿದೆ. ಭಯ, ನಂಬಿಕೆ, ವಿಧಿ ನಡುವಿನ ಘರ್ಷಣೆಯ ಕಥೆಯನ್ನು ಅಯ್ಯನ ಮನೆ ವೆಬ್‌ ಸರಣಿ ಹೊಂದಿದೆಯಂತೆ.

ಒಟಿಟಿಗಳಲ್ಲಿ ಕನ್ನಡ ಒರಿಜಿನಲ್‌ ವೆಬ್‌ಸರಣಿಗಳು ಬರುತ್ತಿಲ್ಲ ಎಂಬ ದೂರು ಇದೆ. ಕನ್ನಡದಲ್ಲಿ ವೆಬ್‌ ಸರಣಿ ಮಾಡಿದರೆ ಅದನ್ನು ಒಟಿಟಿಗಳು ಖರೀದಿಸುತ್ತಿಲ್ಲ ಎಂಬ ಬೇಸರವೂ ಇದೆ. ಇದೇ ಕಾರಣದಿಂದ ರಕ್ಷಿತ್‌ ಶೆಟ್ಟಿ ತನ್ನ ಏಕಂ ವೆಬ್‌ ಸರಣಿಯನ್ನು ಸ್ವಂತ ವೆಬ್‌ಸೈಟ್‌ ನಿರ್ಮಿಸಿ ಜನರ ಜತೆ ಹಂಚಿಕೊಂಡಿದ್ದರು. ಕನ್ನಡ ವೆಬ್‌ ಸರಣಿ ವಿಭಾಗದಲ್ಲಿ ಇದೀ...