ಭಾರತ, ಮಾರ್ಚ್ 3 -- ಶ್ರೀರಾಮನ ಪುಣ್ಯಭೂಮಿ, ರಾಮಮಂದಿರ ಇರುವ ಅಯೋಧ್ಯೆಯಲ್ಲಿ ಇದೀಗ ಹೊಸ ಸವಾಲು ಎದುರಾಗಿದೆ. ಅಯೋಧ್ಯೆ ಪುರಸಭೆಯು ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಸಂದಿಗ್ಧತೆಗೆ ಸಿಲುಕಿಕೊಂಡಿದೆ. ರಾಮ ಮಂದಿರಕ್ಕೆ ದಿನನಿತ್ಯ ಲಕ್ಷಾಂತರ ಭಕ್ತರು ಬರುತ್ತಿದ್ದು, ಹಲವರು ಪಾದರಕ್ಷೆಗಳನ್ನು ಅಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಹೀಗಾಗಿ ಪ್ರವೇಶ ದ್ವಾರದ ಬಳಿ ಉಳಿದ ಪಾದರಕ್ಷೆಗಳ ಬೃಹತ್‌ ರಾಶಿಯನ್ನು ವಿಲೇವಾರಿ ಮಾಡುವುದು ಸವಾಲಾಗಿ ಪರಿಣಿಸಿದೆ.

ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭವಾದ ನಂತರ ಉತ್ತರ ಪ್ರದೇಶಕ್ಕೆ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗಾಗಿ ದೇವಾಲಯದಲ್ಲಿ ಜನಸಂದಣಿಯ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಆಗಮನ ಹೆಚ್ಚುತ್ತಿರುವುದು ಪಾದರಕ್ಷೆಗಳ ಸಮಸ್ಯೆಗೆ ಕಾರಣವಾಗಿದೆ.

ರಾಮಮಂದಿರಕ್ಕೆ ಬರುವ ಭಕ್ತರು ದೇವಾಲಯದ ಪ್ರವೇಶ ದ್ವಾರಗಳ ಬಳಿ ಚಪ್ಪಲಿ, ಶೂಗಳನ್ನು ಬಿಟ್ಟುಹೋಗುತ್ತಿದ್ದಾರೆ. ಹೀಗಾಗಿ ನಿತ್ಯ ಲಕ್ಷಾಂತರ ಪಾದರಕ್ಷೆಗಳು ರಾಶಿಬೀಳುತ್ತಿ...