ಭಾರತ, ಏಪ್ರಿಲ್ 12 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 11ರ ಸಂಚಿಕೆಯಲ್ಲಿ ವಿಜಯಾಂಬಿಕಾ ಹೇಳಿದಂತೆ ಸುಬ್ಬು-ಶ್ರಾವಣಿ, ವರದ-ವರಲಕ್ಷ್ಮೀ ಹನಿಮೂನ್‌ಗೆ ಎಲ್ಲಿಗೆ ಹೋಗ್ತಾ ಇದ್ದಾರೆ ಎಂದು ತಿಳಿಯದೇ ಪರದಾಡುತ್ತಿದ್ದಾಳೆ ಶ್ರೀವಲ್ಲಿ. ಹೇಗಾದರೂ ಮಾಡಿ ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದು ಹಟ ಹಿಡಿಯುವ ಅವಳು ಅಣ್ಣ-ಅತ್ತಿಗೆ ಮಾತು ಕದ್ದು ಕೇಳಿಸಿಕೊಳ್ಳಲು ಯೋಚಿಸುತ್ತಾಳೆ. ಸೀದಾ ಅವರ ಕೋಣೆಯ ಬಳಿಗೆ ಬಂದು ಹೊರಗಡೆ ಬಾಗಿಲ ಬಳಿ ನಿಲ್ಲುತ್ತಾಳೆ. ಆಗ ಅವಳಿಗೆ ವರಲಕ್ಷ್ಮೀ ತನ್ನ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಿರುವುದು ಕೇಳಿಸುತ್ತದೆ. ಆದರೂ ಸುಬ್ಬು ಮೇಲಿನ ಹುಚ್ಚು ಪ್ರೀತಿ ಅವಳನ್ನು ಎಲ್ಲ ರೀತಿಯಿಂದಲೂ ಕುರುಡು ಮಾಡಿರುತ್ತದೆ. ಬೇರೆಲ್ಲ ವಿಷಯ ಮಾತನಾಡಿದರೂ ಹನಿಮೂನ್‌ಗೆ ಎಲ್ಲಿಗೆ ಹೋಗ್ತೀವಿ ಅಂತ ವರಲಕ್ಷ್ಮೀ ಕೇಳಿದ್ದಕ್ಕೆ ಉತ್ತರ ಹೇಳುವುದಿಲ್ಲ ವರದ. ಸರ್ಪ್ರೈಸ್ ಅಲ್ಲಿಗೆ ಹೋದ ಮೇಲೆ ನಿಂಗೆ ಗೊತ್ತಾಗುತ್ತೆ ಬಿಡು ಅಂತಾನೆ. ಆಗ ವರಲಕ್ಷ್ಮೀ...