Bengaluru, ಮೇ 24 -- ಕೋಲ್ಕತ್ತ: ಅಂಗಡಿಯಲ್ಲಿ 15 ರೂ. ಚಿಪ್ಸ್ ಪ್ಯಾಕೆಟ್ ಕಳ್ಳತನದ ಆರೋಪ ಮತ್ತು ಸಾರ್ವಜನಿಕವಾಗಿ ನಿಂದಿಸಿ, ಹಲ್ಲೆ ನಡೆಸಿದ ಪರಿಣಾಮ ಮನನೊಂದ 12ರ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ವರದಿಯಾಗಿದೆ. ಅಂಗಡಿಯವರ ಪ್ರಕಾರ, ಬಾಲಕ ಹೊರಗಡೆ ಇದ್ದ ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಹೋಗಿದ್ದಾನೆ ಮತ್ತು ಅದಕ್ಕೆ ಹಣ ಪಾವತಿಸಿಲ್ಲ ಎನ್ನುವ ಆರೋಪವಾಗಿದೆ. ಆದರೆ ಪೊಲೀಸರ ಪ್ರಕಾರ, 7ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಕೃಷ್ಣೇಂದು, ಚಿಪ್ಸ್ ಖರೀದಿಸಲು ಗೋಸೈಬರ್ ಬಜಾರ್‌ಗೆ ಹೋಗಿದ್ದನು, ಆದರೆ ಅಂಗಡಿಯಲ್ಲಿ ಯಾರೂ ಕಂಡುಬಂದಿಲ್ಲ ಎಂದು ವರದಿಯಾಗಿದೆ. ನಂತರ ಅವನು, ಅಂಕಲ್, ನಾನು ಚಿಪ್ಸ್ ತೆಗೆದುಕೊಳ್ಳುತ್ತೇನೆ ಎಂದು ಕೂಗಿದ್ದಾನೆ, ಆದರೆ ಅದಕ್ಕೆ ಅಂಗಡಿಯಾತನಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅವನ ತಾಯಿ ಹೇಳಿದ್ದಾರೆ. ಬಳಿಕ, ಸುತ್ತಲೂ ಯಾರೂ ಇಲ್ಲ ಎಂದು ಭಾವಿಸಿ, ಅವನು ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಹೊರಟುಹೋಗಿದ್ದ ಎಂದು ಆರೋಪಿಸಲಾಗಿದೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.