ಭಾರತ, ಮಾರ್ಚ್ 29 -- ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ವೀಪರ್ ಒಬ್ಬರ ಮಗಳು ಅದೇ ಕಾಲೇಜಿನಲ್ಲಿ ಕಲಿತು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ‍್ಯಾಂಕ್ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಎಂಎ ಕನ್ನಡದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ವೀಕ್ಷಿತಾ ಅವರ ತಾಯಿ ಸುಜಾತ ಅವರು ಮಂಗಳೂರು ವಿಶ್ವವಿದ್ಯಾನಿಯಲದ ಅಧೀನದಲ್ಲಿರುವ ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದಾರೆ. ಇವರ ಮಗಳು ವೀಕ್ಷಿತಾ ಇದೇ ಸಂಸ್ಥೆಯಲ್ಲಿ ಇದೀಗ ಎಂಎ ಕನ್ನಡದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಾಥಮಿಕ ಶಾಲೆಯನ್ನು ರಾಣಿಪುರದಲ್ಲಿ , ಪ್ರೌಢಶಾಲೆ ಬಬ್ಬುಕಟ್ಟೆಯಲ್ಲಿ ಮಾಡಿ ಬಳಿಕ ಬಲ್ಮಠ ಮಹಿಳಾ ಕಾಲೇಜಿನಲ್ಲಿ ಪಿಯುಸಿಯಲ್ಲಿ ಡಿಸ್ಟಿಂಕ್ಸನ್‌ನಲ್ಲಿ ತೇರ್ಗಡೆಯಾಗಿದ್ದರು.

ಪದವಿಯನ್ನು ಅಮ್ಮ ಕೆಲಸ ಮಾಡುವ ಹಂಪನಕಟ್ಟೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಕಲಿತ ಇವರು, ...