ಭಾರತ, ಮೇ 7 -- ಅಮ್ಮ ಈ ಜಗತ್ತಿನ ಮೊದಲ ಸೃಷ್ಟಿ. ನವಮಾಸ ತನ್ನ ಹೊಟ್ಟೆಯಲ್ಲಿ ಕಂದಮ್ಮ ಹೊತ್ತು ಈ ಸುಂದರ ಪ್ರಪಂಚಕ್ಕೆ ಕರೆ ತರುವ ಅದ್ಭುತ ಜೀವ ತಾಯಿ. ಆಕೆಯೊಂದು ವಿಶೇಷ ಶಕ್ತಿ. ಈ ಜಗತ್ತಿನಲ್ಲಿ ಅತ್ಯಂತ ನೋವು ಕಾಣುವವಳು ಅವಳೇ, ಅತ್ಯಂತ ಖುಷಿ ಕಾಣುವವಳು ಅವಳೇ. ಅಮ್ಮನೆಂಬ ಜಗತ್ತಿನ ಅದ್ಭುತಕ್ಕೆ ಗೌರವ ಸಲ್ಲಿಸುವ ಹಾಗೂ ಅಮ್ಮನ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ಉದ್ದೇಶದಿಂದ ಪ್ರತಿ ವರ್ಷ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷ ಅಮ್ಮಂದಿರ ದಿನ ಯಾವಾಗ, ಈ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವೇನು, ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 11 ಕ್ಕೆ ಅಮ್ಮಂದಿರ ದಿನವಿದೆ.
1908ರಿಂದ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತಿದೆ. ಅಮೆರಿಕ ಮೂಲದ ಹೋರಾಟಗಾರ್ತಿ ಅನ್ನಾ ಜಾರ್ವಿಸ್ ಮೊದಲ ಬಾರಿಗೆ ಅಮ್ಮಂದಿರ ದಿನವನ್ನು ಆಚರಿಸಿದರು. ತನ್ನ ತಾಯಿಯ ಮಾನವೀಯ ಕೆಲಸಗಳಿಂದ ಪ್ರೇರಿತರಾದ ಆಕೆ ಅಮ್ಮನಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.