Bengaluru, ಮೇ 11 -- ಚಂದನವನದ ಚೆಂದದ ಗಾಯಕ ವಾಸುಕಿ ವೈಭವ್‌ ಇದೀಗ ಅಪ್ಪ ಆಗ್ತಿದ್ದಾರೆ. ಪತ್ನಿ ಬೃಂದಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅಮ್ಮಂದಿರ ದಿನದಂದೇ ಈ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವ ವಾಸುಕಿ, ಈ ವರ್ಷದ ಅಮ್ಮಂದಿರ ದಿನ ನನ್ನ ಪಾಲಿಗೆ ಇನ್ನೂ ಸ್ಪೇಷಲ್‌ ಎಂದಿದ್ದಾರೆ.

ಪತ್ನಿ ಬೃಂದಾ ಜತೆ ನಿಂತು ಬೇಬಿ ಬಂಪ್‌ ಫೋಟೋ ರಿವೀಲ್‌ ಮಾಡಿದ ವಾಸುಕಿ ವೈಭವ್‌, ಎಲ್ಲ ಮಹಿಳೆಯರಿಗೆ ತಾಯಂದಿರ ದಿನದ ಶುಭಾಶಯಗಳು. ನೀವು ಇಲ್ಲದೆ ಈ ಜಗತ್ತು ಇಲ್ಲ. ಈ ತಾಯಂದಿರ ದಿನ ನನ್ನ ಪಾಲಿಗೂ ವಿಶೇಷ. ನಿಮ್ಮೆಲ್ಲರಿಗೂ ಹೊಸದಾಗಿ ತಾಯಿ ಆಗಲಿರುವವರನ್ನು ಪರಿಚಯಿಸುತ್ತಿದ್ದೇನೆ. ಜತೆಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತೇನೆ ಎಂದಿದ್ದಾರೆ.

ಅಂದಹಾಗೆ ವಾಸುಕಿ ವೈಭವ್‌ ಮತ್ತು ಬೃಂದಾ ದಂಪತಿಯ ಮದುವೆ 2023ರ ನವೆಂಬರ್‌ 16ರಂದು ನಡೆದಿತ್ತು. ಎರಡೂ ಕುಟುಂಬದ ಆಪ್ತರು, ಸಿನಿಮಾ ಸ್ನೇಹಿತರು ಈ ಮದುವೆಗೆ ಸಾಕ್ಷಿಯಾಗಿದ್ದರು.

ವಾಸುಕಿ ವೈಭವ್‌ ಸಂಗೀತ ನಿರ್ದೇಶನ ಮತ್ತು ಗಾಯನದಲ್ಲಿ ತೊಡ...