ಭಾರತ, ಮೇ 10 -- ಅಮ್ಮಂದಿರ ದಿನ ನಾಳೆಯೇ ಇದೆ. ನಿಮ್ಮ ಅಮ್ಮನಿಗೆ ವಿಶೇಷವಾದ ಅಡುಗೆ ಮಾಡಿ ಬಡಿಸಬೇಕು ಅಂತ ನೀವು ಅಂದುಕೊಳ್ಳುತ್ತಾ ಇರಬಹುದು. ಆದರೆ ಏನು ಮಾಡೋದು ಅನ್ನೋ ಗೊಂದಲ ನಿಮಗೂ ಇರಬಹುದು. ವೆಜ್ ಇರಲಿ, ನಾನ್ ವೆಜ್ ಇರಲಿ ಇಬ್ಬರಿಗೂ ಇಷ್ಟವಾಗುವ ರೆಸಿಪಿಯೊಂದನ್ನು ನಾವು ನಿಮಗೆ ಹೇಳುತ್ತೇವೆ.

ಅಮ್ಮಂದಿರ ದಿನದ ಸಲುವಾಗಿ ನೀವು ವಿಶೇಷವಾದ ಪನೀರ್ ಧಮ್ ಬಿರಿಯಾನಿ ಮಾಡಬಹುದು. ಇದು ಟೇಸ್ಟ್ ಅಂತೂ ಸೂಪರ್ ಆಗಿರುತ್ತೆ. ಈ ರೆಸಿಪಿ ನಿಮ್ಮ ತಾಯಿಯ ಹೊಟ್ಟೆ ತುಂಬಿಸುವುದು ಮಾತ್ರವಲ್ಲ, ಅವರ ಮನಸ್ಸಿಗೂ ಖುಷಿ ಕೊಡುತ್ತದೆ. ನಾಳೆ ಭಾನುವಾರವಾಗಿದ್ದು ಮನೆಯಲ್ಲಿ ಪನೀರ್ ದಮ್ ಬಿರಿಯಾನಿ ತಯಾರಿಸಿ, ಅಮ್ಮಂದಿರ ದಿನವನ್ನು ವಿಶೇಷವನ್ನಾಗಿಸಿ, ರೆಸಿಪಿ ಇಲ್ಲಿದೆ.

ಬಾಸ್ಮತಿ ಅಕ್ಕಿ - 2 ಕಪ್‌, ನೀರು - ಅಗತ್ಯಕ್ಕೆ ತಕ್ಕಂತೆ, ಉಪ್ಪು - 1 ಚಮಚ, ಬಿರಿಯಾನಿ ಎಲೆ - 1, ಅನಾನಸ್ ಮೊಗ್ಗು - 3, ಚಕ್ಕೆ - 1 ಇಂಚು, ಲವಂಗ - 3, ಜಾಪತ್ರಿ - 1, ಏಲಕ್ಕಿ - 2, ನಿಂಬೆ ರಸ - ಸ್ವಲ್ಪ, ತುಪ್ಪ - 3 ಚಮಚ, ತಾಜಾ ಕೊತ್ತಂಬರಿ ಸೊಪ್ಪು - 2 ಚಮಚ...