ಭಾರತ, ಮಾರ್ಚ್ 6 -- ಅಮೆಲಿಯಾ ಕೇರ್​ ಭರ್ಜರಿ ಬೌಲಿಂಗ್ (5 ವಿಕೆಟ್) ಜೊತೆಗೆ ಹೀಲಿ ಮ್ಯಾಥ್ಯೂಸ್ ಅವರ ಆರ್ಭಟದ ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್​ 16ನೇ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಪರಾಭವಗೊಳಿಸಿದೆ. ಇದರೊಂದಿಗೆ ಕಳೆದ ಪಂದ್ಯದ ಸೋಲಿನಿಂದ ಲಯಕ್ಕೆ ಮರಳಿದ ಮುಂಬೈ 4 ಗೆಲುವುಗಳೊಂದಿಗೆ 8 ಅಂಕ ಸಂಪಾದಿಸಿ ಪ್ಲೇಆಫ್​ ಹಾದಿಯನ್ನು ಬಹುತೇಕ ಖಚಿತಪಡಿಸಿದೆ. ಆದರೆ ದೀಪ್ತಿ ಶರ್ಮಾ ನೇತೃತ್ವದ ಯುಪಿ ವಾರಿಯರ್ಸ್ ಹ್ಯಾಟ್ರಿಕ್ ಸೋಲಿನ ಜೊತೆಗೆ ಒಟ್ಟಾರೆ 5ನೇ ಸೋಲಿಗೆ ಶರಣಾಗಿದೆ. ತವರಿನಲ್ಲಿ ನಡೆದ 2ನೇ ಪಂದ್ಯದಲ್ಲೂ ಮುಗ್ಗರಿಸಿದೆ.

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಮಾರ್ಚ್ 6ರಂದು ನಡೆದ ಪಂದ್ಯದಲ್ಲಿ ಯುಪಿ ಒಡ್ಡಿದ 151 ರನ್​ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಮುಂಬೈ, 18.3 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಯುಪಿ ತನ್ನ ಐದನೇ ಪರಾಭವದೊಂದಿಗೆ ಪ್ಲೇಆಫ್ ಪ್ರವೇಶಿಸಲು ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲುವುದು ಅನಿವಾರ್ಯ. ಆಲ...