ಭಾರತ, ಜನವರಿ 30 -- ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ ಮತ್ತು 64 ಪ್ರಯಾಣಿಕರಿದ್ದ ಪ್ರಯಾಣಿಕರ ಜೆಟ್ ನಡುವೆ ಸಂಭವಿಸಿದ ಭೀಕರ ಅಪಘಾತದಿಂದಾಗಿ ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ಯುಎಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ ಲೋಹದ ಹಕ್ಕಿಗಳು ಗಾಳಿಯಲ್ಲಿ ಹಾರುತ್ತಿದ್ದಾಗ ಪರಸ್ಪರ ಡಿಕ್ಕಿಯಾಗಿವೆ. ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ವಾಷಿಂಗ್ಟನ್ ಅಗ್ನಿಶಾಮಕದಳದ ಮುಖ್ಯಸ್ಥ ಜಾನ್ ಡೊನೆಲ್ಲಿ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಈಗಾಗಲೇ 28 ಶವಗಳನ್ನು ಹೊರತೆಗೆಯಲಾಗಿದ್ದು, ಒಂದು ಶವ ಹೆಲಿಕಾಪ್ಟರ್‌ನಲ್ಲಿತ್ತು ಎಂದು ಡೊನೆಲ್ಲಿ ಹೇಳಿದ್ದಾರೆ. ಉಳಿದ ಯಾರೂ ಬದುಕಿರುವ ನಂಬಿಕೆ ನಮಗಂತೂ ಇಲ್ಲ ಎಂದಿದ್ದಾರೆ.

ಅಮೆರಿಕನ್ ಏರ್‌ಲೈನ್ಸ್‌ನ ಅಂಗಸಂಸ್ಥೆ ಪಿಎಸ್ಎ ಏರ್ಲೈನ್ಸ್ ನಿರ್ವಹಿಸುವ ಪ್ರಾದೇಶಿಕ ಜೆಟ್, ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ವಾಷಿಂಗ್ಟನ್‌ನಲ್ಲಿರುವ ಪೊಟೊಮ...