ಭಾರತ, ಮಾರ್ಚ್ 15 -- ಡೊನಾಲ್ಡ್ ಟ್ರಂಪ್ (Donald Trump) ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಲವು ಖಡಕ್‌ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಇದೀಗ ಸರ್ಕಾರವು ಅಮೆರಿಕಕ್ಕೆ ಹಲವಾರು ದೇಶಗಳ ನಾಗರಿಕರು ಪ್ರಯಾಣ ಮಾಡವುದಕ್ಕೆ ನಿರ್ಬಂಧ ಹೇರಲು ಮುಂದಾಗಿದೆ. ಈ ಕುರಿತು ಅಧಿಕೃತ ಆಂತರಿಕ ಮೆಮೋವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ಮಾಡಿದೆ. ಈವರೆಗೂ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅನುಮೋದನೆ ನೀಡದ ಕಾರಣ, ನಿರ್ಬಂಧ ಹೇರಲಾದ ದೇಶಗಳ ಪಟ್ಟಿ ಸದ್ಯ ತಾತ್ಕಾಲಿಕವಾಗಿದೆ. ನಂತರ ಮತ್ತೆ ಬದಲಾಗಬಹುದು ಎಂದು ಯುಎಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಸದ್ಯ ಮೆಮೋದಲ್ಲಿ 41 ದೇಶಗಳನ್ನು ಸಂಭಾವ್ಯ ಪ್ರಯಾಣ ನಿಷೇಧದ ಅಡಿಯಲ್ಲಿ ಮೂರು ವರ್ಗಗಳಲ್ಲಿ ಪಟ್ಟಿ ಮಾಡಲಾಗಿದೆ. ಪೂರ್ಣ ವೀಸಾ ಅಮಾನತು, ಭಾಗಶಃ ವೀಸಾ ಅಮಾನತು ಮತ್ತು ಭಾಗಶಃ ಅಮಾನತು. ಇದರಲ್ಲಿ ಎರಡನೆಯದ್ದು(ಭಾಗಶಃ ವೀಸಾ ಅಮಾನತು) ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ಕೆಲವು ರೀತಿಯ ವೀಸಾಗಳ ಮೇಲೆ ಪರಿಣಾಮ ಬೀರುತ್ತ...