ಭಾರತ, ಮೇ 5 -- ಐಪಿಎಲ್ ಹವಾ ಜೋರಾಗಿದೆ. ಈ ನಡುವೆ ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ಸಹ-ಮಾಲಕಿಯೂ ಆದ ಪ್ರೀತಿ ಜಿಂಟಾ ಅವರು ತಮ್ಮ ಮಕ್ಕಳ ಬಗ್ಗೆ ಅಭಿಮಾನಿಗಳಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಪ್ರೀತಿ ಜಿಂಟಾ ಅಮೆರಿಕನ್ ಪ್ರಜೆ ಜೀನ್ ಗುಡೆನೊಫ್‍ನನ್ನು ಮದುವೆಯಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದರೂ ಮಕ್ಕಳನ್ನು ಹಿಂದೂಗಳನ್ನಾಗಿ ಬೆಳೆಸುತ್ತಿದ್ದೇವೆ ಎಂದು ಬಹಿರಂಗಪಡಿಸಿದ್ದಾರೆ.

ಎಕ್ಸ್‌ನಲ್ಲಿ ತನ್ನ ಅಭಿಮಾನಿಗಳೊಂದಿಗೆ ನಡೆಸಿದ ಸಣ್ಣ ಮಾತುಕತೆಯಲ್ಲಿ, ಪ್ರೀತಿ ಜಿಂಟಾ ಈ ವಿಚಾರ ಹೊರ ತಂದಿದ್ದಾರೆ. ತಾಯಿಯಾದ ನಂತರ ಮತ್ತು ವಿದೇಶದಲ್ಲಿ ವಾಸಿಸಿದ ನಂತರ ತನ್ನ ಮಕ್ಕಳು ತಾವು ಅರ್ಧ ಭಾರತೀಯರು ಎಂಬುದನ್ನು ಮರೆಯಬಾರದು ಎಂದು ತಾನು ಬಯಸುತ್ತೇನೆ. ತನ್ನ ಪತಿ ನಾಸ್ತಿಕವಾದಿಯಾಗಿರುವುದರಿಂದ ಮಕ್ಕಳನ್ನು ಹಿಂದೂಗಳನ್ನಾಗಿ ಬೆಳೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬದುಕುತ್ತೇನೆ ಎಂದುಕೊಂಡಿರಲಿಲ್ಲ, ದೇವರಿಗೆ ಧನ್ಯವಾದ; ಲಾಸ್‌ ಏಂಜಲೀಸ್‌ ಕಾಡ್ಗಿಚ್ಚು ದುರಂತವನ್ನು ವಿವರಿಸಿದ ಬಾಲಿವುಡ್‌ ನಟಿ ಪ್ರೀ...