ಭಾರತ, ಮಾರ್ಚ್ 7 -- ಏಪ್ರಿಲ್ 2ರಿಂದ ಜಾರಿಗೆ ಬರುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬಹಳಷ್ಟು ದೇಶಗಳ ಮೇಲೆ ಸುಂಕವನ್ನು ಹೆಚ್ಚಿಸಿದ್ದಾರೆ. ಇದರೊಂದಿಗೆ ಹೇಳಿದ ಮಾತಿನಂತೆ ಹಲವು ದೇಶಗಳ ವಿರುದ್ಧ ಸುಂಕ ಸಮರವನ್ನು ಆರಂಭಿಸಿದಂತಾಗಿದೆ. ಭಾರತದ ಮೇಲೆ ಅಮೆರಿಕ ಸುಂಕ ವಿಧಿಸುವುದು ನೂರು ಪ್ರತಿಶತ ಖಚಿತ. ಅದರ ಬಗ್ಗೆ ನಿಲುವು ಬದಲಿಸಲು ಸಾಧ್ಯವಿಲ್ಲ ಎಂದು ನರೆಂದ್ರ ಮೋದಿ ಅಮೆರಿಕ ಪ್ರವಾಸ ಹೋಗಿದ್ದ ಸಮಯದಲ್ಲೇ ಟ್ರಂಪ್ ಒತ್ತಿ ಹೇಳಿದ್ದರು. ಆದರೆ, ಇದೀಗ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಅವಘಡಗಳಿಗೆ ಕಾರಣವಾಗುತ್ತಿದೆ. ಅದು ಹೇಗೆ ಎಂಬುದನ್ನು ರಂಗಸ್ವಾಮಿ ಮೂಕನಹಳ್ಳಿ ತಿಳಿಸಿದ್ದಾರೆ. ಮುಂದೆ ಇರುವುದು ರಂಗಸ್ವಾಮಿ ಬರಹ.

ನೀವು ಡೊನಾಲ್ಡ್ ಟ್ರಂಪ್ ಅವರನ್ನು ಗಮನಿಸಿ ನೋಡಿ. ಅವರು ಕಳೆದ ಬಾರಿ ಅಧ್ಯಕ್ಷರಾಗಿದ್ದಾಗ ಇದ್ದ ದಾಢಸಿತನಕ್ಕಿಂತ ನೂರು ಪಟ್ಟು ಅಗ್ರೆಸಿವ್ ಆಗಿದ್ದಾರೆ. ಅವರು ಮಾಡುತ್ತಿರುವುದು ಅವರ ದೇಶಕ್ಕೆ ಕೂಡ ಪೂರ್ಣ ಪ್ರಮಾಣದಲ್ಲಿ ಒಳಿತನ್ನು ಮಾಡುವುದಿಲ್ಲ. ನರ...