Delhi, ಏಪ್ರಿಲ್ 21 -- ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ದಂಪತಿ ಭಾರತ ಪ್ರವಾಸಕ್ಕೆ ಬಂದಿದ್ದು, ಸೋಮವಾರ ಅಕ್ಷರಧಾಮ ದೇಗುಲಕ್ಕೆ ಮೊದಲ ಬೇಟಿ ನೀಡಿದರು. ಅವರ ಮಕ್ಕಳು ಭಾರತೀಯ ಉಡುಪು ಧರಿಸಿ ಸಂಭ್ರಮಿಸಿದರು. ಜೆಡಿ ವ್ಯಾನ್ಸ್ ಅವರು ನಾಳೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಉಷಾ ದಂಪತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಬರಮಾಡಿಕೊಂಡರು.

ಜೆಡಿ ವ್ಯಾನ್ಸ್ ಅವರೊಂದಿಗೆ ಪತ್ನಿ ಉಷಾ ಮತ್ತು ಮೂವರು ಮಕ್ಕಳು ಹಾಗೂ ಕೆಲವು ಉನ್ನತಾಧಿಕಾರಿಗಳು ಜತೆಗಿದ್ದರು.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಮೊದಲ ಅಧಿಕೃತ ಭಾರತ ಭೇಟಿ ಇದಾಗಿದ್ದು, ಅವರಿಗೆ ಸೇನಾ ಗೌರವ ನೀಡಿ ಬರಮಾಡಿಕೊಳ್ಳಲಾಯಿತು. ಅವರು ದೆಹಲಿ ಭೇಟಿಯ ಬಳಿಕ ಆಗ್ರಾ ಮತ್ತು ಜೈಪುರಗಳಿಗೆ ಭೇಟಿ ನೀಡಲಿದ್ದಾರೆ.

ಪಾಲಂ ವಿಮಾನ ನಿಲ್ದಾಣದಲ್ಲಿ ಜೆಡಿ ವ್ಯಾನ್ಸ್ ಅವರಿಗೆ ಸರ್ಕಾರದ ಗೌರವ ರಕ್ಷೆ.

ಪಾಲಂ ವಿಮಾನ ನಿಲ್ದಾಣದಲ್ಲಿ...