Bengaluru, ಮೇ 5 -- ವಾಷಿಂಗ್ಟನ್: ಅಮೆರಿಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ವಿದೇಶಿ ನಿರ್ಮಿತ ಚಲನಚಿತ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸುವ ಕ್ರಮವನ್ನು ಪ್ರಾರಂಭಿಸಲು ವಾಣಿಜ್ಯ ಇಲಾಖೆ ಮತ್ತು ಯುಎಸ್‌ಟಿಆರ್‌ಗೆ ಸೂಚನೆ ನೀಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರೂತ್ ಸೋಷಿಯಲ್ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಇತರ ದೇಶಗಳು ಅಮೆರಿಕದ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ದೇಶದಿಂದ ದೂರ ಸೆಳೆಯುತ್ತಿವೆ ಎಂದು ಆರೋಪಿಸಿದ್ದಾರೆ. ಹೀಗಾಗಿ ದುಬಾರಿ ಸುಂಕ ವಿಧಿಸುವ ಕ್ರಮವನ್ನು ಜಾರಿಗೆ ತರುತ್ತಿರುವುದಾಗಿ ಅವರು ಹೇಳಿದ್ದಾರೆ.

ಅಮೆರಿಕದ ಚಲನಚಿತ್ರೋದ್ಯಮವು ಬಹಳ ವೇಗವಾಗಿ ಸಾಯುತ್ತಿದೆ. ನಮ್ಮ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ಅಮೆರಿಕದಿಂದ ದೂರವಿರಿಸಲು ಇತರ ದೇಶಗಳು ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತಿವೆ. ಹಾಲಿವುಡ್ ಮತ್ತು ಅಮೆರಿಕದೊಳಗಿನ ಇತರ ಅನೇಕ ಸ್ಟುಡಿಯೋ, ನಿರ್ಮಾಣ ಸಂಸ್ಥೆಗಳು ನಾಶವಾಗುತ್ತಿವೆ. ಇದು ಇತರ ರಾಷ್ಟ್ರಗಳ ಸಂ...