ಭಾರತ, ಮಾರ್ಚ್ 2 -- ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವಿನ ಬಹಿರಂಗ ಮಾತುಕತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಮಾಧ್ಯಮಗಳ ಮುಂದೆ ಉಭಯ ದೇಶಗಳ ನಾಯಕರ ಗಂಭೀರ ಮಾತುಕತೆಯ ಬೆನ್ನಲ್ಲೇ, ಜಾಗತಿಕ ಮಟ್ಟದಲ್ಲಿ ಅಮೆರಿಕ ಪ್ರಾಬಲ್ಯದ ಕುರಿತ ಚರ್ಚೆ ನಡೆಯುತ್ತಿದೆ. ಅಮೆರಿಕ ಕಣ್ಣು ಬಿದ್ದ ದೇಶಗಳು ಅಷ್ಟು ಸುಲಭದಲ್ಲಿ ಮೇಲೇಳಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯ. ಹಿಂದೆ ವೆನೆಜುವೆಲಾ ಎಂಬ ಸಣ್ಣ ದೇಶವು, ತಲಾದಾಯದ ಲೆಕ್ಕಾಚಾರದಲ್ಲಿ ಶ್ರೀಮಂತ ದೇಶ ಎನಿಸಿಕೊಂಡಿತ್ತು. ಆದರೆ ಈ ದೇಶದ ಸದ್ಯದ ಸ್ಥಿತಿ ಹೇಳತೀರದಾಗಿದೆ. ಇವೆಲ್ಲಾ ಒಂದಕ್ಕೊಂದು ಸಂಬಂಧ ಹೊಂದಿವೆ. ಈ ಕುರಿತು ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದಿರುವ ಲೇಖನ ಇಲ್ಲಿದೆ.

ವೆನೆಜುವೆಲಾ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಅಮೆರಿಕ ಮತ್ತು ಸ್ಪೇನ್ ದೇಶಗಳಿಗೆ ಸದಾ ಸೆಟೆದು ನಿಂತ ಆ ದೇಶದ ದಿವಂಗತ ನಾಯಕ ಹುಗೊ ಚಾವೇಸ್. ಬಹುತೇಕ ದಕ್ಷಿಣ ಅಮೆರಿಕದ ಅಧ್ಯಕ್ಷರು ನಿಗೂಢ ಸಾವನ್ನಪ್ಪಿದವರೇ. ಗಟ್ಟಿಮುಟ್ಟ...