ಭಾರತ, ಫೆಬ್ರವರಿ 1 -- ಫಿಲಡೆಲ್ಫಿಯಾ (ಯುಎಸ್‌ಎ): ಅಮೆರಿಕದ ಫಿಲಡೆಲ್ಫಿಯಾದಲ್ಲಿ ಶನಿವಾರ (ಭಾರತೀಯ ಕಾಲಮಾನ) ಲಘು ವಿಮಾನ ಅಪಘಾತಕ್ಕೀಡಾಗಿದೆ. ವಾಷಿಂಗ್ಟನ್‌ ವಿಮಾನ ದುರಂತದ ನೆನಪು ಮಾಸುವ ಮುನ್ನವೇ ಯುಎಸ್‌ನಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಶಾಪಿಂಗ್‌ ಮಾಲ್‌ ಮೇಲೆ ವಿಮಾನ ಬಿದ್ದು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಶನಿವಾರ (ಫೆ.1) ಬೆಳಗಿನ ಜಾವ ಫಿಲಡೆಲ್ಫಿಯಾದ ಶಾಪಿಂಗ್ ಮಾಲ್ ಬಳಿ ವಿಮಾನ ಅಪಘಾತಕ್ಕೀಡಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಲವಾರು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಸಾವುನೋವು ಸಂಭವಿಸುವ ಸಾಧ್ಯತೆ ಇದೆ. ಕನಿಷ್ಠ ಇಬ್ಬರು ಪ್ರಯಾಣಿಕರನ್ನು ಹೊತ್ತ ವಿಮಾನವು ಶಾಪಿಂಗ್ ಮಾಲ್ ಬಳಿ ಅಪಘಾತಕ್ಕೀಡಾಗಿದ್ದು, ಸಾವುನೋವುಗಳು ಸಂಭವಿಸಿವೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವಿಮಾನ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಬಿಎನ್‌ಒ ನ್ಯೂಸ್ ತಿಳಿಸಿದೆ. ಆದರೆ, ಸಾವುನೋವುಗಳ ಬಗ್ಗೆ ಅಧಿಕೃತ ದೃಢೀಕರಣ ಇನ್ನಷ್ಟೇ ಸಿಗಬೇಕಿದೆ.

ಫಿಲಾಡೆಲ್ಫಿಯಾ ತುರ್ತು ನಿರ್...