ಭಾರತ, ಫೆಬ್ರವರಿ 14 -- ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಮಹತ್ವದ ಬೆಳವಣಿಗೆ. ಜನವರಿ 20ರಂದು ಎರಡನೇ ಅವಧಿಗೆ ಯುಎಸ್‌ಎ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಹಿಂದಿರುಗಿದ ನಂತರ, ಟ್ರಂಪ್‌ ಅವರನ್ನು ಮೋದಿ ಮೊದಲ ಬಾರಿಗೆ ಭೇಟಿಯಾದರು. ವಿಶ್ವದ ಇಬ್ಬರು ಪ್ರಭಾವಿ ನಾಯಕರು ತಮ್ಮ ಆತ್ಮೀಯತೆಯನ್ನು ಪರಸ್ಪರ ಶ್ಲಾಘಿಸಿದರು. ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಹಾಗೂ ವ್ಯಾಪಾರ ಒಪ್ಪಂದಗಳನ್ನು ಆಶಿಸಿದರು. ಟ್ರಂಪ್‌ ಭೇಟಿಗೂ ಮುನ್ನ, ಅಮೆರಿಕ ಅಧ್ಯಕ್ಷರ ಪರಸ್ಪರ ಸುಂಕ‌ (reciprocal tariff) ಯೋಜನೆಗಳ ಘೋಷಣೆ ಬಗ್ಗೆ ಭಾರಿ ಕಳವಳವಿತ್ತು.

ಮೋದಿ ಅವರನ್ನು ಭೇಟಿಯಾಗುವ ಮುನ್ನವೇ ಭಾರತ ಸೇರಿದಂತೆ ಅಮೆರಿಕದ ವ್ಯಾಪಾರ ಪಾಲುದಾರರ ಮೇಲೆ ಪರಸ್ಪರ ಸುಂಕ ವಿಧಿಸುವ ಯೋಜನೆಗಳ ಕುರಿತು ಟ್ರಂಪ್ ಘೋಷಿಸಿದರು. ಟ್ರಂಪ್‌ ಹಾಗೂ ಮೋದಿ ಭೇಟಿಯ ಪ್ರಮುಖ ಅಂಶಗಳಿವು.

ಫೆ.14ರ ಶುಕ್ರವಾರ (ಅಮೆರಿಕದಲ್ಲಿ ಗುರುವಾರ) ಶ್ವೇತಭವನದಲ್ಲಿ ಪ್ರಧಾನಿ ಮೋದಿಯನ...