ಭಾರತ, ಫೆಬ್ರವರಿ 16 -- Trump Buyout Offer: ಅಮೆರಿಕದಲ್ಲಿ ಈ ಬಾರಿ ಉದ್ಯಮಿಗಳ ಆಡಳಿತ ಶುರುವಾಗಿದೆ. ಮೂಲತಃ ಉದ್ಯಮಿಯಾಗಿರುವ ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ಹಿಡಿದಿದ್ದು, ಈ ಬಾರಿ ಪಕ್ಕಾ ಕಾರ್ಪೊರೇಟ್ ಸ್ಟೈಲ್‌ಗೆ ಆಡಳಿತವನ್ನು ಕೊಂಡೊಯ್ಯುವ ಸೂಚನೆ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ ಬೆನ್ನಿಗೆ ಫಡೆರಲ್ ವ್ಯವಸ್ಥೆಗೆ ಚುರುಕು ಮುಟ್ಟಿಸಿರುವ ಡೊನಾಲ್ಡ್ ಟ್ರಂಪ್, 20 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿಯ ಆಫರ್ ನೀಡಿದ್ದಾರೆ. ಅಮೆರಿಕದ ಫಡೆರಲ್ ಸರ್ಕಾರದ ವ್ಯವಸ್ಥೆಯಲ್ಲಿ 23 ಲಕ್ಷಕ್ಕೂ ಹೆಚ್ಚು ನಾಗರಿಕರು ವಿವಿಧ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ರಾಯ್ಟಿರ್ಸ್ ಸುದ್ದಿ ಸಂಸ್ಥೆಯ ಇತ್ತೀಚಿನ ವರದಿ ಪ್ರಾಕರ, 75,000ಕ್ಕೂ ಹೆಚ್ಚು ಉದ್ಯೋಗಿಗಳು ಡೊನಾಲ್ಡ್ ಟ್ರಂಪ್ ಅವರ ಈ ಆಫರ್ ಅನ್ನು ಸ್ವೀಕರಿಸಿದ್ದಾರೆ.

ಅಮೆರಿಕದ ಫಡರಲ್ ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ಡೊನಾಲ್ಡ್‌ ಟ್ರಂಪ್ ಆಡಳಿತವು ಸ್ವಯಂ ನಿವೃತ್ತಿ ಯೋಜನೆಯನ್ನು ಘೋಷಿಸಿತ್ತು. ಫೆ 6ರ ಒಳಗೆ ಈ ಕುರ...