ಭಾರತ, ಮಾರ್ಚ್ 9 -- ಯುಗಾದಿ ವಿಶ್ವ ಭವಿಷ್ಯ: ಪ್ರಿ ಓದುಗರೇ, ಶ್ರೀ ವಿಶ್ವಾವಸು ಸಂವತ್ಸರದ ಪ್ರಪಂಚದ ಭವಿಷ್ಯದ ಬಗ್ಗೆ ಬರೆಯುವ ವೇಳೆ ಒಂದು ಮಗುವಿನ ಮೂಲಕ ಕವಡೆಯನ್ನು ಹಾಕಿಸುವ ಮೂಲಕ ಲಗ್ನವನ್ನು ಪರಿಗಣಿಸಿದ್ದೇನೆ. ಇದರಲ್ಲಿಯೂ ದಶಾಭುಕ್ತಿಯನ್ನು ಮುಖ್ಯವಾಗಿ ಗಮನಿಸಿದ್ದೇನೆ. ಇಲ್ಲಿ ಗ್ರಹಗಳ ಸಂಯೋಗ ಮತ್ತು ಪರಸ್ಪರ ದೃಷ್ಟಿಯನ್ನು ಆಧರಿಸಿ ಭವಿಷ್ಯದ ಆಗುಹೋಗುಗಳನ್ನು ಲೆಕ್ಕ ಹಾಕಿದ್ದೇನೆ.

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಸೂರ್ಯನ ಪ್ರಭಾವವು ಅಧಿಕವಾಗಿರುತ್ತದೆ. ಚಂದ್ರ ಮತ್ತು ಬುಧ ಗ್ರಹಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಡೀ ಜಗತ್ತಿನಲ್ಲಿ ಕ್ರಮೇಣವಾಗಿ ಆತ್ಮೀಯತೆ ಮತ್ತು ಪ್ರೀತಿ-ವಿಶ್ವಾಸ ಕಡಿಮೆಯಾಗುತ್ತದೆ. ಒಂದು ದೇಶವು ಮತ್ತೊಂದು ದೇಶವನ್ನು ನಂಬಲು ಸಾಧ್ಯವಾಗದಂತಹ ಪರಿಸ್ಥಿತಿಯು ನಿರ್ಮಿತವಾಗುತ್ತದೆ. ಮುಂದುವರಿದ ದೇಶಗಳು ತಮ್ಮ ಸ್ವಂತ ವಿಚಾರಗಳು ಮತ್ತು ನಿರ್ಧಾರಗಳಿಗೆ ಆದ್ಯತೆ ನೀಡುತ್ತವೆ. ಈ ಕಾರಣದಿಂದ ವಿಶ್ವದಲ್ಲಿ ಸಣ್ಣಪುಟ್ಟ ಬಣಗಳು ಹುಟ್ಟಿಕೊಳ್ಳುತ್ತವೆ.

ಅಮೆರಿಕದಂಥ ದೇಶಗಳು ತಮ್ಮದೇ ಆದ ತಪ್...