ಭಾರತ, ಏಪ್ರಿಲ್ 27 -- ಕನ್ನಡದಲ್ಲಿ ಅಯ್ಯನ ಮನೆ ಎಂಬ ಮೊದಲ ವೆಬ್‌ ಸಿರೀಸ್ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈಗಾಗಲೇ ಸಾಕಷ್ಟು ವೆಬ್‌ ಸಿರೀಸ್‌ಗಳು ಬಿಡುಗಡೆಯಾಗಿ ವಿವಿಧ ಒಟಿಟಿ ವೇದಿಕೆಗಳಲ್ಲಿ ಸ್ಟ್ರೀಮ್ ಆಗುತ್ತಿವೆ. ತಮಿಳಿನ ಕೆಲವು ಥ್ರಿಲ್ಲರ್ ವೆಬ್‌ ಸರಣಿಗಳು ಅಮೆಜಾನ್ ಪ್ರೈಮ್‌ನಲ್ಲಿ ಟ್ರೆಂಡ್‌ನಲ್ಲಿವೆ. ಸುಡಾಲ್‌ ಸೇರಿದಂತೆ ಇನ್ನೂ ಕೆಲವು ವೆಬ್‌ ಸರಣಿಗಳು ಸೂಪರ್‌ ಹಿಟ್ ಆಗಿವೆ. ನಿಮಗೂ ಥ್ರಿಲ್ಲರ್ ವೆಬ್‌ ಸರಣಿ ನೋಡುವ ಆಸೆ ಇದ್ದರೆ ಅಮೆಜಾನ್ ಪ್ರೈಮ್‌ನಲ್ಲಿರುವ ಈ 5 ಟಾಪ್ ವೆಬ್ ಸಿರೀಸ್‌ಗಳನ್ನು ನೋಡಲು ಮರೆಯಬೇಡಿ.

ತಮಿಳು ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ಸುಡಾಲ್: ದಿ ವೋರ್ಟೆಕ್ಸ್ ಅಮೆಜಾನ್ ಪ್ರೈಮ್ ವಿಡಿಯೊ ಒಟಿಟಿಯಲ್ಲಿ ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಕಂಡಿದೆ. ಐಶ್ವರ್ಯಾ ರಾಜೇಶ್ ಮತ್ತು ಕಾಥಿರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸರಣಿಯ ಮೊದಲ ಸೀಸನ್ 2022 ರಲ್ಲಿ ಬಿಡುಗಡೆಯಾಯಿತು ಜನ ಮೆಚ್ಚುಗೆ ಪಡೆಯಿತು. ಈ ಸರಣಿಯು ಕೊಲೆ ರಹಸ್ಯಗಳ ಸುತ್ತ ಸುತ್ತುವ...