Bangalore, ಏಪ್ರಿಲ್ 19 -- ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆ ಮಾಡಿದೆ. ಅಲ್ಲಿ ಜೈದೇವ್‌ ಮಾರು ಧ್ವನಿಯಲ್ಲಿ ಕಿಡ್ನ್ಯಾಪರ್‌ ಸೋಗಿನಲ್ಲಿದ್ದಾನೆ. ಆತನ ಸುತ್ತ ಹಲವು ಗೂಂಡಾಗಳು ಇದ್ದಾರೆ.

ಇನ್ನೊಂದೆಡೆ ಸೃಜನ್‌ಗೆ ಹ್ಯಾಕಿಂಗ್‌ ಗೊತ್ತು. ಕಂಪ್ಯೂಟರ್‌ನಲ್ಲಿ ಫೋನ್‌ ಟ್ರೇಸ್‌ ಮಾಡುತ್ತಿದ್ದಾನೆ. ಜೈದೇವ್‌ ಕಾಲ್‌ ಮಾಡಿದ ಸಮಯದಲ್ಲಿ ಆತನ ಲೊಕೆಷನ್‌ ಟ್ರ್ಯಾಕ್‌ ಮಾಡುತ್ತಿದ್ದಾನೆ. ಸೃಜನ್‌ ನೆರವಿನಿಂದ ಜೈದೇವ್‌ ಇರುವ ಸ್ಥಳ ಗೌತಮ್‌ಗೆ ತಿಳಿಯುವ ಸೂಚನೆ ದೊರಕಿದೆ.

ಹೀಗೆ ಸೃಜನ್‌ ಮಗುವನ್ನು ಕಾಪಾಡಲು ನೆರವಾಗಬಹುದು. ಆದರೆ, ಕೊನೆಯ ಕ್ಷಣದಲ್ಲಿ ಜೈದೇವ್‌ ಸಿಕ್ಕಿ ಬೀಳದೆ ಇರಬಹುದು. ಶಕುಂತಲಾದೇವಿ ಹೇಗಾದರೂ ಮಾಡಿ ಜೈದೇವ್‌ನ ಕೊನೆಕ್ಷಣದಲ್ಲಿ ಕಾಪಾಡಬಹುದು.

ಈ ಕಿಡ್ನ್ಯಾಪ್‌ ಮಾಡಲು ಪ್ರಮುಖ ಕಾರಣವಿದೆ. ಭೂಮಿಕಾ ಮತ್ತು ಸೃಜನ್‌ ಇಬ್ಬರೂ ಜತೆಯಾಗಿ ಮೈಕ್‌ ರಹಸ್ಯ ತಿಳಿಯಲು ಹೋಗಿದ್ದಾರೆ ಎಂದು ಶಕುಂತಲಾ ದೇವಿಗೆ ಗೊತ್ತಿತ್ತು. ಅವರಿಬ್ಬರು ಗಮ್ಯ ತಲುಪುವ ಮೊದಲೇ ಈ ನಾಟಕ ಮಾಡಿ ಮುಗಿ...