Bangalore, ಏಪ್ರಿಲ್ 20 -- ಜೀ ಕನ್ನಡ ವಾಹಿನಿಯು ಅಮೃತಧಾರೆಯ ಹೊಸ ಪ್ರಮೊವೊಂದನ್ನು ಹೊರಬಿಟ್ಟಿದೆ. ಇದರಲ್ಲಿ ಲಚ್ಚಿಯನ್ನು ಕಿಡ್ನ್ಯಾಪರ್‌ಗಳು ಬಿಟ್ಟಿರುತ್ತಾರೆ. ಮನೆಯವರು ಲಚ್ಚಿಯ ಬಳಿ ಮಾತನಾಡುತ್ತಿದ್ದಾರೆ. ಈ ಸಮಯದಲ್ಲಿ ಆಕೆ ನೀಡುವ ಸುಳಿವು ಜೈದೇವ್‌ ಮತ್ತು ಶಕುಂತಲಾದೇವಿಯ ಪಾತ್ರವನ್ನು ಕಂಡುಹಿಡಿಯಲು ನೆರವಾಗಬಹುದೇ ಎಂಬ ಕುತೂಹಲ ಮೂಡಿದೆ.

"ಕಂದಾ ಅಲ್ಲಿ ಎಷ್ಟು ಜನರಿದ್ದರು" ಎಂದು ಮನೆಗೆ ಬಂದಿರುವ ಲಚ್ಚಿ ಬಳಿಯಲ್ಲಿ ಭೂಮಿಕಾ ಕೇಳುತ್ತಾರೆ. "ತುಂಬಾ ಜನರಿದ್ದರು" ಎಂದು ಲಚ್ಚಿ ಉತ್ತರಿಸುತ್ತಾಳೆ.

"ಅಲ್ಲಿಗೊಬ್ಬರು ಆಂಟಿಯೂ ಬಂದಿದ್ರು" ಎಂದು ಲಚ್ಚಿ ಹೇಳುತ್ತಾಳೆ. ಅದೇ ಸಮಯದಲ್ಲಿ ಅಲ್ಲಿಗೆ ಶಕುಂತಲಾದೇವಿ ಬರುತ್ತಾರೆ. "ಏನು ಪ್ರಾಬ್ಲಂ ಆಗಿಲ್ಲ ಅಲ್ವಾ" ಎಂದು ಕೇಳುತ್ತಾರೆ.

"ಏನೂ ಆಗಿಲ್ಲ ಅಜ್ಜಿ" ಎಂದು ಲಚ್ಚಿ ಹೇಳುತ್ತಾಳೆ. ಆಕೆಗೆ ಶಕುಂತಲಾದೇವಿ ಮತ್ತು ಆಕೆಯ ಚಪ್ಪಲಿ ನೋಡುವಾಗ ಏನೋ ಜ್ಞಾಪಕವಾಗುತ್ತದೆ.

ಕಿಡ್ನ್ಯಾಪರ್‌ಗಳ ಬಳಿಗೆ ಬಂದ ಆಂಟಿ ಶಕುಂತಲಾದೇವಿ ಎಂದು ಲಚ್ಚಿಗೆ ತಿಳಿಯುತ್ತದೆ. ಇದನ್ನು ಲಚ್ಚಿಗೆ ಹೇ...