ಭಾರತ, ಏಪ್ರಿಲ್ 25 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಒಂದಿಷ್ಟು ಪ್ರಮುಖ ಬೆಳವಣಿಗೆಗಳು ನಡೆದಿವೆ. ಮಹಿಮಾ ಕುಡಿಯುತ್ತಿದ್ದಾಳೆ. ಈ ರೀತಿ ಮನೆಯಲ್ಲಿ ಕುಡಿಯುವುದು ತಪ್ಪಲ್ವ ಎಂದು ಜೀವನ್‌ ಕೇಳುತ್ತಾನೆ. "ಮನೆಯಲ್ಲಿ ಕುಡಿದರೂ ಲಿವರ್‌ ಡ್ಯಾಮೇಜ್‌ ಆಗುತ್ತದೆ. ಹೊರಗೆ ಕುಡಿದರೂ ಲಿವರ್‌ ಡ್ಯಾಮೇಜ್‌ ಆಗುತ್ತದೆ. ನೀನು ಹೊರಗೆ ಕುಡಿಯುವೆ. ನಾನು ಕುಡಿದರೆ ತಪ್ಪೇನು" ಎಂದು ಮಹಿಮಾ ಹೇಳುತ್ತಾಳೆ. "ಲಿವರ್‌ ಡ್ಯಾಮೇಜ್‌ ಆಗಲಿ, ಅಪ್ಪ ಅಮ್ಮನಿಗೆ ಗೊತ್ತಾದ್ರೆ ಏನಾಗುತ್ತದೆ" ಎಂದು ಜೀವನ್‌ ಹೇಳುತ್ತಾನೆ. "ನೀನು ಹೊರಗೆ ಕುಡಿಯಬೇಡ. ಇಲ್ಲೇ ಕುಡಿಯೋಣ. ಕುಡಿದು ಕುಡಿದು ಸಂಸಾರ ಮಾಡೋಣ" ಎನ್ನುತ್ತಾಳೆ. ಆಗ ಸದಾಶಿವ ಮತ್ತು ಮಂದಾಕಿನಿಯ ಎಂಟ್ರಿ ಆಗುತ್ತದೆ. "ಅಪ್ಪ ನೋಡಿಲ್ಲ" ಎನ್ನುತ್ತಾನೆ. "ಕುಡಿಯಲಿ ಬಿಡಪ್ಪ, ಇದರಲ್ಲಿ ತಪ್ಪೇನು.. ನೀನು ಕುಡಿದ್ರೆ ಕೇಳಲಾಗದು ಅಂದ್ಮೆಲೆ, ಸೊಸೆಯನ್ನು ಹೇಗೆ ಕೇಳಲಾಗುತ್ತದೆ" ಎನ್ನುತ್ತಾರೆ ಸದಾಶಿವ. "ಈಗ ಗೊತ್ತಾಯ್ತು, ನೀವೇ ನನ್ನ ನೆಮ್ಮದಿ ಹಾಳು ಮಾಡಲು ಪ್ಲ್ಯಾನ್‌ ಮಾಡಿದ್ದೀರಿ" ...