ಭಾರತ, ಮೇ 13 -- ಅಮೃತಧಾರೆ ಧಾರಾವಾಹಿ: ಶಕುಂತಲಾದೇವಿ ತನ್ನ ಕೊಠಡಿಗೆ ಬಾಗಿಲು ಹಾಕಿ ಹೊರಬರುತ್ತಿದ್ದಾರೆ. ದಾರಿಯಲ್ಲಿ ಸೃಜನ್‌ ಕುಳಿತು ಕೆಲಸ ಮಾಡುತ್ತಿದ್ದಾನೆ. ಇನ್ನೊಂದೆಡೆ ದಾರಿಯಲ್ಲಿ ಸುಧಾ ತನ್ನ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದಾಳೆ. ಶಕುಂತಲಾ ಹೋದಂತೆ ಇವರಿಬ್ಬರು ಭೂಮಿಕಾಗೆ ಅಪ್‌ಡೇಟ್‌ ನೀಡಿದ್ದಾರೆ. ಶಕುಂತಲಾದೇವಿಯ ಚಲನವಲನಗಳ ಮೇಲೆ ನಿಗಾ ಇಡಲು ಇವರಿಬ್ಬರು ಇದ್ದಾರೆ. ತಿಂಡಿ ತಿನ್ನಲು ಶಕುಂತಲಾ ಬಂದಾಗ ಅಲ್ಲಿ ಮಲ್ಲಿ ಇದ್ದಾಳೆ. ಕೆಲಸದವರು ಎಲ್ಲಿ ಎಂದು ಕೇಳಿದಾಗ ಅವರೆಲ್ಲ ಮಾರ್ಕೆಟ್‌ಗೆ ಹೋಗಿದ್ದಾರೆ ಎಂದು ಮಲ್ಲಿ ಹೇಳುತ್ತಾಳೆ. ಈ ಸಮಯದಲ್ಲಿ ಭೂಮಿಕಾ ಶಕುಂತಲಾದೇವಿಯ ಕೊಠಡಿ ಪ್ರವೇಶಿಸುತ್ತಾಳೆ. ಅಲ್ಲಿ ಎಲ್ಲಾ ಕಡೆ ಹುಡುಕುತ್ತಾಳೆ. ತಿಂಡಿ ತಿನ್ನಲು ಲಕ್ಕಿ ಲಕ್ಷ್ಮಿಕಾಂತ ಕೂಡ ಬರುತ್ತಾನೆ. ಈ ಸಮಯದಲ್ಲಿ ಮಲ್ಲಿ ಆಚೆ ಹೋದಾಗ ಲಕ್ಷ್ಮಿಕಾಂತ್‌ ಅನುಮಾನ ವ್ಯಕ್ತಪಡಿಸುತ್ತಾನೆ. "ಏನೋ ಮಿಸ್‌ ಹೊಡಿತಿದಿಯಲ್ವ. ದಾರಿಯಲ್ಲಿ ಸೃಜನ್‌ ಇದ್ದ.ಯಾವಾಗಲೂ ಮನೆಯ ಒಳಗೆ ಲಚ್ಚಿಗೆ ತಿನ್ನಿಸುತ್ತಿದ್ದ ಸುಧಾ ಇಂದು ಹೊರಗಿದ್ದ...