Bangalore, ಜನವರಿ 26 -- ಅಮೃತಧಾರೆ ಧಾರಾವಾಹಿ ಹೊಸ ತಿರುವುಗಳನ್ನು, ಹೊಸ ಅಧ್ಯಾಯಗಳನ್ನು ಸೇರಿಸಿಕೊಂಡು ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ದಿನಕಳೆದಂತೆ ಈ ಸೀರಿಯಲ್‌ನ ಚಿತ್ರಣವೇ ಬದಲಾಗುತ್ತ ಇರುವುದು ಪ್ರೇಕ್ಷಕರ ಗಮನಕ್ಕೆ ಬಂದಿದೆ. ಹೊಸ ಪಾತ್ರದಾರಿಗಳ ಎಂಟ್ರಿ, ಕಥೆ ಹೊಸ ದಿಕ್ಕಿನತ್ತ ಸಾಗುವ ಸೂಚನೆಗಳು ಇವೆ. ಇದೀಗ ಅಕ್ಕೋರೆ ಅಕ್ಕೋರೆ ಎಂದು ಮುದ್ದಾಗಿ ನಟಿಸುತ್ತಿದ್ದ ರಾಧಾ ಭಗವತಿ ಈ ಸೀರಿಯಲ್‌ ಬಿಡಲಿದ್ದಾರೆಯೇ ಎಂಬ ಅನುಮಾನವೊಂದು ವೀಕ್ಷಕರ ಮನದಲ್ಲಿ ಮೂಡಿದೆ. ಇಂತಹ ಅನುಮಾನ ಹುಟ್ಟಲು ಏನು ಕಾರಣ ಎನ್ನುವಿರಾ?

ರಾಧಾ ಭಗವತಿ ಎಂಬ ಸುಂದರ ನಟಿ, ಗಾಯಕಿ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯಾಗಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಮನೆ ಕೆಲಸದಾಕೆಯ ಪಾತ್ರವಿತ್ತು. ರಾಧಾ ಭಗವತಿ ಮೂಲತಃ ಬಿಜಾಪುರದವರು. ಇವರು ಸ್ಯಾಂಡಲ್‌ವುಡ್‌ ನಟಿಯೂ ಹೌದು. ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎಸ್‌ ನಾರಾಯಣ್‌ ನಿರ್ದೇಶನದ ಒಂದ್ಸಲ ಮೀಟ್‌ ಮಾಡೋಣ ಸಿನಿಮಾದಲ್ಲಿ ನಾಯ...