ಭಾರತ, ಏಪ್ರಿಲ್ 21 -- ಅಮೃತಧಾರೆ ಧಾರಾವಾಹಿ ಆಕ್ಷನ್‌ ಮೋಡ್‌ನಲ್ಲಿದೆ. ಗೌತಮ್‌ ದಿವಾನ್‌ ಹೀರೋ ರೀತಿ ಫೈಟಿಂಗ್‌ ಮಾಡಿದ್ದಾರೆ. ಈ ಸೀರಿಯಲ್‌ನ ಪ್ರಮುಖ ಹೀರೋ ಇವರೇ ಅಲ್ವೇ? ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸಾಕಷ್ಟು ವಿಚಾರಗಳು ತಿಳಿದುಬಂದಿದೆ.

ಸೃಜನ್‌ ಕರೆ ಮಾಡುತ್ತಾನೆ. "ರೌಡಿಗಳು ಕರೆ ಮಾಡಿದ ಆ ಲೊಕೆಷನ್‌ ಕನ್‌ಫರ್ಮ್‌ ಆಯ್ತು ಸರ್‌" ಎಂದು ಸೃಜನ್‌ ತಿಳಿಸುತ್ತಾನೆ. "ಹೌದಾ" ಎಂದು ಗೌತಮ್‌ ಹೇಳುತ್ತಾರೆ. ಈಗಲೇ ಬರುತ್ತೇವೆ ಎಂದು ಆನಂದ್‌ ಜತೆ ಹೋಗುತ್ತಾರೆ.

"ಎಲ್ಲಿದ್ದಾರೆ ಅವರು" ಎಂದು ಗೌತಮ್‌ ಕೇಳುತ್ತಾರೆ. "ಕುಂಬಳಗೋಡು ಇಂಡಸ್ಟ್ರಿಯಲ್‌ ಏರಿಯಾ" ಎಂದು ಸೃಜನ್‌ ಮಾಹಿತಿ ನೀಡುತ್ತಾನೆ.

"ಜೈ ಮೊದಲು ಇಲ್ಲಿಂದ ಹೊರಡೋಣ. ಅಪಾಯ ಇದೆ ಇಲ್ಲಿ" ಎಂದು ಶಕುಂತಲಾದೇವಿ ಹೇಳುವ ದೃಶ್ಯ ಕಾಣಿಸುತ್ತದೆ. ಅವರೆಲ್ಲರು ಗೋಡಾನ್‌ನಲ್ಲಿದ್ದಾರೆ. ರೌಡಿಗಳು, ಜೈದೇವ್‌ ಎಲ್ಲರೂ ಅಲ್ಲಿದ್ದಾರೆ.

ಇವರು ಅಲ್ಲಿಂದ ಹೊರಡುವ ಯೋಜನೆ ಮಾಡಿದಾಗಲೇ ಹೊರಗೆ ಕಾರು ಬಂದು ನಿಂತಿದೆ. ಗೌತಮ್‌ ದಿವಾನ್‌ ಮತ್ತು ಆನಂದ್‌ ಎಂಟ್ರ...