ಭಾರತ, ಏಪ್ರಿಲ್ 16 -- ಅಮೃತಧಾರೆ ಧಾರಾವಾಹಿ ಏಪ್ರಿಲ್‌ 15ರ ಸಂಚಿಕೆ: ಗೌತಮ್‌ ಮತ್ತು ಭೂಮಿಕಾ ಔಟಿಂಗ್‌ ಹೋಗಿದ್ದಾರೆ. ಬೈಕ್‌ನಲ್ಲಿ ಜಾಲಿ ರೈಡ್‌ ಮಾಡಿದ್ದಾರೆ. ಹೋಟೆಲ್‌ನಲ್ಲಿ ಕುಳಿತು ಇವರಿಬ್ಬರು ಮಾತನಾಡುತ್ತಿದ್ದಾರೆ. ಹುಟ್ಟಲ್ಲಿರುವ ಮಗುವಿನ ಕುರಿತು ಇಬ್ಬರೂ ಮುಕ್ತವಾಗಿ ಮಾತನಾಡುತ್ತಾರೆ. ಒಬ್ಬರನೊಬ್ಬರು ಹೊಗಳುತ್ತ ಇದ್ದಾರೆ. ಇಬ್ಬರೂ ಲವರ್ಸ್‌ ರೀತಿ ಎಂಜಾಯ್‌ ಮಾಡುತ್ತಿದ್ದಾರೆ. ಜ್ಯೂಸ್‌ ಅನ್ನೇ ಐಸ್‌ಕ್ರೀಮ್‌ ಎಂದುಕೊಂಡು ಕುಡಿಯುತ್ತಿದ್ದಾರೆ. ಇದೇ ಸಮಯದಲ್ಲಿ ಗೌತಮ್‌ಗೆ ಆಫೀಸ್‌ನಿಂದ ಕರೆ ಬರುತ್ತದೆ. ಅವರು ಆ ಕಡೆ ಹೋಗುವಾಗ ಭೂಮಿಕಾಗೆ ಮಾತಿನ ಮಲ್ಲ ಸೃಜನ್‌ ಕರೆ ಮಾಡುತ್ತಾನೆ. "ಆ ಸರದಲ್ಲಿ ಮೈಕ್‌ ಇಟ್ಟಿರುವುದನ್ನು ಸುಲಭವಾಗಿ ಕಂಡುಹಿಡಿಯಬಹುದು. ರೆಡ್‌ಹ್ಯಾಂಡ್‌ ಆಗಿ ಕಂಡುಹಿಡಿಯಬಹುದು" ಎಂದು ಹೇಳುತ್ತಾನೆ.

ಹೀಗೆ, ಇವರಿಬ್ಬರು ಹೊರಗೆ ಹೋಗಿ ಮತ್ತೆ ಮನೆಗೆ ವಾಪಸ್‌ ಬಂದಿದ್ದಾರೆ. ಆಗ ಆನಂದ್‌ ಬರುತ್ತಾನೆ. "ಒಂದೇ ಸಮಯದಲ್ಲಿ ಚಾನೆಲ್‌ನವರು ಪ್ರಶ್ನಿಸ್ತಾ ಇದ್ದಾರೆ" ಎಂದು ಆನಂದ್‌ ಹೇಳುತ್ತಾನೆ. "ಚಾನೆಲ್‌ನ...