Bengaluru, ಫೆಬ್ರವರಿ 26 -- Amruthadhaare serial Yesterday Episode: ಅಪೇಕ್ಷಾ ತನ್ನ ತವರು ಮನೆಗೆ ಹೋಗಿ ಅಲ್ಲಿ ತನ್ನ ತಂದೆ ತಾಯಿ ಮುಂದೆ ಭೂಮಿಕಾಳಿಗೆ ಮಕ್ಕಳಾಗುವುದಿಲ್ಲ ಎಂದು ತಿಳಿಸಿ ವಿಕೃತವಾಗಿ ಸಂಭ್ರಮಿಸಿದ್ದಾಳೆ. "ನಾವು ಮರೆತರೂ ನಾವು ಮಾಡಿರುವ ಕರ್ಮ ಮರೆಯೋದಿಲ್ಲ. ಅಕ್ಕ ನನಗೆ ಮದುವೆ ಸಮಯದಲ್ಲಿ ಎಷ್ಟೆಲ್ಲ ಕಷ್ಟಕೊಟ್ಟಿದ್ದಾಳೆ. ಅವಳಿಂದ ಸಾಕಷ್ಟು ಅನುಭವಿಸಿದ್ದೇನೆ" ಎಂದೆಲ್ಲ ಮಾತನಾಡಿದ್ದಾಳೆ. ಇವಳ ಮಾತು ಕೇಳಿ ಮಂದಾಕಿನಿ, ಸದಾಶಿವ ಸೇರಿದಂತೆ ಎಲ್ಲರಿಗೂ ಆಘಾತವಾಗಿದೆ. "ಹ್ಯಾಪಿ ನ್ಯೂಸ್‌ ಎಂದು ಏನು ಮಾತನಾಡ್ತ ಇದ್ದೀಯ" ಎಂದು ಪಾರ್ಥ ಮಾತನಾಡಲು ಯತ್ನಿಸಿದ್ದಾನೆ. "ಮದುವೆ ಸಮಯದಲ್ಲಿ ಮಾಡಿದ ಅನ್ಯಾಯವನ್ನು ನಾನು ಮರೆಯೋದಿಲ್ಲ. ನಿಮ್ಮ ಮಗಳು ಎಂತಹ ರಾಜಕೀಯ ಮಾಡಿದ್ದಾಳೆ ಎಂದು ಕಣ್ಣಾರೆ ನೋಡಿದ್ದೇನೆ. ನನ್ನನ್ನು ಅಯ್ಯೋ ಅನಿಸಿದ್ಲು. ಈಗ ಅವಳು ಅಯ್ಯೋ ಅನ್ತಾ ಇದ್ದಾಳೆ" ಎಂದು ಅಪೇಕ್ಷಾ ಹೇಳುತ್ತಾಳೆ. ಆಕೆಯ ಮಾತಿಗೆ ಎಲ್ಲರೂ ಸಂಕಟಗೊಳ್ಳುತ್ತಾರೆ. ಅಷ್ಟು ಹೇಳಿ ಅಪೇಕ್ಷಾ ಹೊರಡುತ್ತಾಳೆ. ಪಾರ್ಥ ಎಲ್ಲರಲ್ಲ...