ಭಾರತ, ಮಾರ್ಚ್ 1 -- ಅಮೃತಧಾರೆ ಧಾರಾವಾಹಿಯ ಮಾರ್ಚ್‌ 1ರ ಎಪಿಸೋಡ್‌ನಲ್ಲಿಯೂ ಶಕುಂತಲಾದೇವಿಯ ನಾಟಕ ಮುಂದುವರೆದಿದೆ. "ಸತ್ಯವನ್ನು ಮುಚ್ಚಿಟ್ಟು ಗೌತಮ್‌ ಇದು ತನ್ನದೇ ಸಮಸ್ಯೆ ಎಂದ" "ಈ ಮನೆಯ ಒಳ್ಳೆಯದಕ್ಕೆ ನೀನು ದೃಢ ನಿರ್ಧಾರ ತೆಗೆದುಕೊಳ್ಳಬೇಕು. ನೀನು ಗೌತಮ್‌ನಿಂದ ದೂರವಾಗಲೇಬೇಕು" "ಹೀಗೆ ಮಕ್ಕಳಾಗದೆ ಇದ್ದಾಗ ಮತ್ತೊಂದು ಮದುವೆಯಾಗುವುದು ಒಳ್ಳೆಯದಲ್ವ" ಹೀಗೆ ಅತ್ತೆ ಹೇಳಿದ ಮಾತುಗಳನ್ನು ನೆನಪಿಸಿಕೊಂಡು ಭೂಮಿಕಾ ಗೋಳೋ ಎಂದು ಅಳುತ್ತಿದ್ದಾಳೆ. "ಐ ಲವ್‌ ಯು ಗೌತಮ್‌" ಎಂದು ಅಳು ಮುಂದುವರೆಯುತ್ತದೆ. ಹಳೆಯ ಕ್ಷಣಗಳು ನೆನಪಾಗುತ್ತವೆ. "ನಮಗೆ ಮಗುವಾಗಲಿ ಬಿಡಲಿ, ನನಗೆ ನೀವು ಯಾವಾಗಲೂ ಮಗುವಿನ ರೀತಿಯೇ ಇರುತ್ತೀರಿ" ಎಂದು ಹೇಳಿದ್ದೂ ನೆನಪಾಗುತ್ತದೆ.

ಆನಂದ್‌ ಪೂಜೆ ಮಾಡುತ್ತಿದ್ದಾರೆ. ಅಲ್ಲಿಗೆ ಅಪರ್ಣಾ ಬರುತ್ತಾಳೆ. ಇಷ್ಟೊತ್ತಲ್ಲಿ ದೇವರ ಮನೆಯಲ್ಲಿ ಏನು ಮಾಡ್ತಾ ಇದ್ದೀರಿ ಎಂದು ಕೇಳುತ್ತಾಳೆ. "ನಿದ್ದೆ ಬರಲಿಲ್ಲ, ಅದಕ್ಕೆ ಬಂದೆ ಎನ್ನುತ್ತಾನೆ. ದೇವರಲ್ಲಿ ಹರಕೆ ಹೊತ್ತುಕೊಳ್ಳಲು ಬಂದೆ. ಗೌತಮ್‌ನ ಕಷ್ಟ ನೋಡಲಾಗುತ್ತಿಲ್...