ಭಾರತ, ಮಾರ್ಚ್ 3 -- Amruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಎರಡನೇ ಮದುವೆ ಮಾಡಲು ಶಕುಂತಲಾದೇವಿ ತುದಿಗಾಲಿನಲ್ಲಿ ನಿಂತಿರುವ ಕಥೆ ಎಲ್ಲರಿಗೂ ಗೊತ್ತು. ಗೌತಮ್‌ಗೆ ಇನ್ನೊಂದು ಮದುವೆ ಮಾಡುವ ವಿಷಯದಲ್ಲಿ ಶಕುಂತಲಾದೇವಿ ತುಂಬಾ ಸ್ಪೀಡ್‌ ಆಗಿದ್ದಾರೆ. ತಾನೇ ಹುಡುಗಿಯನ್ನೂ ಹುಡುಕಿದ್ದಾರೆ. ಈ ಹುಡುಗಿಯ ಜತೆ ಭೂಮಿಕಾ ಮಾತುಕತೆ ನಡೆಸಿದ್ದಾರೆ. ಇವರ ಮಾತುಕತೆಯ ವಿವರ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ವಿಶೇಷವೆಂದರೆ, ಗೌತಮ್‌ ದಿವಾನ್‌ಗೆ ಎರಡನೇ ಹೆಂಡತಿಯಾಗಿ ಬರಲಿರುವ ಯುವತಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. ಸೀರಿಯಲ್‌ ನಿರ್ದೇಶಕರು ಇನ್ನೊಬ್ಬರು ಟೀಚರಮ್ಮನನ್ನು ಗೌತಮ್‌ಗೆ ಹುಡುಕಿದ್ದಾರೆ.

ಹೌದು, ಈ ಹಿಂದೆ ರಾಧಾ ರಮಣ ಸೀರಿಯಲ್‌ನ ಮಿಸ್‌ ಆಗಿ ಪ್ರೇಕ್ಷಕರ ಮನಗೆದ್ದಿದ್ದ ಶ್ವೇತಾ ಪ್ರಸಾದ್‌ ಅವರು ಮಧುರ ಹೆಸರಿನಲ್ಲಿ ಅಮೃತಧಾರೆ ಧಾರಾವಾಹಿಗೆ ಎಂಟ್ರಿ ನೀಡಿದ್ದಾರೆ. ಈ ಎರಡನೇ ಮದುವೆ ಎಲ್ಲಿಯವರೆಗೆ ಹೋಗುತ್ತದೆ ಎನ್ನುವುದು ಗೊತ್ತಿಲ್ಲ. ಸ...