ಭಾರತ, ಮಾರ್ಚ್ 13 -- ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅದ್ಧೂರಿ ತೆರೆ ಬಿದ್ದಿತು. ಇದೀಗ ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣಣೆ ಶುರುವಾಗಿದೆ. ಮಾರ್ಚ್​ 22ರಿಂದ ಮೇ 25ರ ತನಕ ನಾನ್​ಸ್ಟಾಪ್ 2 ತಿಂಗಳ ಕಾಲ ಭರ್ಜರಿ ಮನರಂಜನೆ ರಸದೌತಣ ಉಣಬಡಿಸಲಿದೆ. ಈಗಾಗಲೇ ಬಹುತೇಕ ಆಟಗಾರರು ಆಯಾ ತಂಡಗಳನ್ನು ಕೂಡಿಕೊಂಡಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ಆಟಗಾರರೂ ತಮ್ಮಮ್ಮ ಫ್ರಾಂಚೈಸಿಗಳತ್ತ ತೆರಳುತ್ತಿದ್ದಾರೆ. ಮತ್ತೊಂದೆಡೆ ಕೆಲ ಸ್ಟಾರ್​ ಆಟಗಾರರು ಜಾಹೀರಾತುಗಳ ನಟನೆಯಲ್ಲಿ ತೊಡಗಿದ್ದಾರೆ. ಅದರ ಒಂದು ವಿಡಿಯೋ ಈಗ ನೆಟ್​ನಲ್ಲಿ ಧೂಳೆಬ್ಬಿಸುತ್ತಿದೆ.

ಬಾಲಿವುಡ್ ಸೂಪರ್​​ಸ್ಟಾರ್​ಗಳಾದ ಅಮೀರ್ ಖಾನ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಅಭಿನಯಿಸಿರುವ ಬ್ರಾಂಡ್ ಜಾಹೀರಾತಿಗಾಗಿ ಭಾರತ ತಂಡದ ಸ್ಟಾರ್​ ಆಟಗಾರರು ಆಫ್​ ಫೀಲ್ಡ್​​ನಲ್ಲಿ ಮತ್ತೆ ಒಂದಾಗಿದ್ದಾರೆ. ಫ್ಯಾಂಟಸಿ ಸ್ಪೋರ್ಟ್ಸ್ ವೆಬ್​ಸೈಟ್​ ಮತ್ತು ಮೊಬೈಲ್ ಅಪ್ಲಿಕೇಶನ್ ಡ್ರೀಮ್ 11 ಐಪಿಎಲ್ 2025ಕ್ಕೂ ಮುನ್ನ ಕ್ರಿಕೆಟ್ ಮತ್ತು ಬಾಲ...