ಭಾರತ, ಏಪ್ರಿಲ್ 27 -- ಡಾನ್, ಬಡೇ ಮಿಯಾ ಚೋಟೆ ಮಿಯಾ, ಸೂರ್ಯವಂಶಂ ಮುಂತಾದ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ದ್ವಿಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಆದರೆ ಇವರು ದ್ವಿಪಾತ್ರದಲ್ಲಿ ನಟಿಸಿರುವ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ. ಆದರೆ ಇವರ ನಟನೆ ಮಾತ್ರ ಜನ ಗಮನ ಸೆಳೆದಿತ್ತು.

ಡಾನ್: 1978ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಮಿತಾಬ್ ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದರು. ಡಾನ್ ಮತ್ತು ವಿಜಯ್ ಪಾತ್ರಗಳಿಗೆ ಅವರು ಜೀವ ತುಂಬಿದ್ದರು. ಈ ಚಿತ್ರ ಆ ಕಾಲದಲ್ಲಿ ಸೂಪರ್‌ಹಿಟ್ ಆಗಿತ್ತು.

ಮಹಾನ್‌: ಈ ಚಿತ್ರ 1983ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಅಮಿತಾಬ್‌ ವಕೀಲ, ರಂಗಭೂಮಿ ಕಲಾವಿದ ಮತ್ತು ಡಾನ್ ಈ ಮೂರು ಪಾತ್ರಗಳನ್ನು ನಿರ್ವಹಿಸಿದ್ದರು.

ಸಟ್ಟೆ ಪೆ ಸಟ್ಟಾ: 1982ರಲ್ಲಿ ಬಿಡುಗಡೆಯಾದ ಈ ಕಾಮಿಡಿ ಚಿತ್ರದಲ್ಲಿ ಅಮಿತಾಬ್‌ ರವಿ ಮತ್ತು ಕ್ರಿಮಿನಲ್ ಬಾಬು ಪಾತ್ರಗಳನ್ನು ನಿರ್ವಹಿಸಿದ್ದರು. ಈ ಚಿತ್ರ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಇದ...