ಭಾರತ, ಫೆಬ್ರವರಿ 16 -- Opinion: ಅಪಘಾತ, ಕಾಲ್ತುಳಿತ ಮುಂತಾದ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡವರನ್ನು ನೋಡಿದಾಗ ಸಂಕಟವಾಗುತ್ತದೆ. ಬಹುತೇಕ ಮುಗ್ಧರು, ಅಮಾಯಕರು. ಸ್ವಲ್ಪ ವಿವೇಚನೆ, ಸಂಯಮಗಳ ಮೂಲಕ ದುರಂತಗಳನ್ನು ತಪ್ಪಿಸಬಹುದಾಗಿತ್ತು. ಸಾವು - ನೋವಿನ ವಿಚಾರ ಸಾರ್ವಜನಿಕವಾಗಿ ಕೂಡ ಚರ್ಚೆಯಾಗುತ್ತಿರುವ ಹೊತ್ತು ಇದು. ಈ ಹಂತದಲ್ಲಿ ಲೇಖಕ ಮಧು ವೈ ಎನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, "ಕುವೆಂಪು ಮೊದಲಾಗಿ ಮಹಾನುಭಾವರೆಲ್ಲರೂ ಇಂತಹ ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರು ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು" ಎಂಬುದನ್ನು ಸ್ಮರಿಸಿಕೊಂಡಿದ್ದಾರೆ. ಅವರ ಬರಹ ಇಲ್ಲಿದೆ.

ಮೊನ್ನೆ ಮಧ್ಯಪ್ರದೇಶದಲ್ಲಿ ಒಂದು ಹತ್ತು ಜನ ಸತ್ತಿದ್ದರು. ನಿನ್ನೆ ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಡ್ರೈವ್‌ ಮಾಡುತ್ತಾ ಸ್ನೇಹಿತರೊಂದಿಗೆ ಈ ದೇಶದಲ್ಲಿ ಯಾರಲ್ಲಿಯೂ ಸ್ವಲ್ಪವೂ ಅಪರಾಧ ಪ್ರಜ್ಞೆಯೇ ಇಲ್ಲವಲ್ಲ ಎಂದು ನೊಂದು ಮಾತಾಡುತ್ತಿದ್ದೆ. ಇಂದು ಬೆಳಿಗ್ಗೆ ಕಣ್ಬಿಟ್ಟರೆ ಮತ್ತೆ ಹದಿನೈದು ಸಾವು. ದುರಂತದ ಕಾಕತಾಳ...