ಭಾರತ, ಫೆಬ್ರವರಿ 19 -- ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ರ‍್ಯಾಗಿಂಗ್‌ ಪ್ರಕರಣ ಬೆಳಕಿಗೆ ಬಂದಿದೆ. ಪ್ರಥಮ ವರ್ಷದ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಯ ಮೇಲೆ ಸೀನಿಯರ್‌ಗಳು ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕೇರಳದ ಕರಿಯವಟ್ಟಂ ಸರ್ಕಾರಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಆಂತರಿಕ ರ್‍ಯಾಗಿಂಗ್ ವಿರೋಧಿ ಸಮಿತಿಯ ಸಂಶೋಧನೆಯ ಆಧಾರದ ಮೇಲೆ ಕಾಲೇಜಿನಿಂದ ಏಳು ಹಿರಿಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ ಕಾಲೇಜು ಪ್ರಾಂಶುಪಾಲರು ವರದಿ ಸಲ್ಲಿಸಿದ ನಂತರ ಪೊಲೀಸರು ಈ ವಿದ್ಯಾರ್ಥಿಗಳ ವಿರುದ್ಧ ಕೇರಳ ರ್‍ಯಾಗಿಂಗ್ ನಿಷೇಧ ಕಾಯ್ದೆ, 1998ರ ಸೆಕ್ಷನ್ 4ರ ಅಡಿ ದೂರು ದಾಖಲಿಸಿದ್ದಾರೆ.

ವಟ್ಟಪ್ಪರ ಮೂಲದ 19 ವರ್ಷದ ಪ್ರಥಮ ವರ್ಷದ ಬಿಎಸ್‌ಸಿ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿ, ರ್‍ಯಾಗಿಂಗ್ ವಿಷಯವಾಗಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಕಳಕೂಟ್ಟಂ ಪೊಲೀಸರು 7 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹಿರಿಯ ವಿದ್ಯಾರ್ಥಿಗಳ ಮೇಲೆ ಬಿಎನ್ಎಸ್ ಸೆಕ್ಷನ್ 189(2) ಕಾನೂನುಬಾಹ...