Bengaluru, ಏಪ್ರಿಲ್ 19 -- ಸೋಷಿಯಲ್ ಮೀಡಿಯಾಗಳಲ್ಲಿ ಸದ್ಯ ಕವಿತೆಗಳು, ಕವಯಿತ್ರಿಯರು ಹಾಗೂ ಅವರ ಕವಿತೆ ವಾಚನಗಳ ಕುರಿತಾದ ಚರ್ಚೆ ಮುಗಿಲು ಮುಟ್ಟಿದೆ. ವಿಷಯಾಧಾರಿತವಾದ ಪರ - ವಿರೋಧ ಪ್ರತಿಕ್ರಿಯೆಗಳು ಒಂದೆಡೆ, ಅನಾಮಿಕರಾಗಿ, ಯಾವ್ಯಾವುದೇ ನಕಲಿ ಖಾತೆ ಮೂಲಕ ಬೇಕಾಬಿಟ್ಟಿ ಕಾಮೆಂಟ್ ಮಾಡುವವರು ಮತ್ತೊಂದು ಕಡೆ. ಪ್ರತಿಕ್ರಿಯೆಗಳಿಗೂ ಅವಾಚ್ಯ ಪ್ರತಿಕ್ರಿಯೆಗಳನ್ನು ನೀಡುತ್ತ ಸಾಗುವ ಪ್ರವೃತ್ತಿಯವರು ಮಗದೊಂದು ಕಡೆ. ಇವೆಲ್ಲದರ ಕೇಂದ್ರ ಬಿಂದುವಾಗಿ ಕಂಡುಬಂದ ಬುಕ್‌ಬ್ರಹ್ಮ ಫೇಸ್‌ಬುಕ್ ಪುಟದಲ್ಲಿ "ಗಮನಕ್ಕೆ..!" ಎಂಬ ಕೆಂಪು ಅಕ್ಷರಗಳ ನೋಟಿಸ್ ಗಮನಸೆಳೆಯಿತು. ಅದಕ್ಕೆ ಬಂದಿರುವ ಕಾಮೆಂಟ್‌ಗಳು ಕೂಡ ಮೇಲೆ ಹೇಳಿದ ಅದೇ ಮಾದರಿಯಲ್ಲಿ ಕಂಡುಬಂದಿವೆ. ಬುಕ್‌ಬ್ರಹ್ಮ ಫೇಸ್‌ಬುಕ್‌ ಪುಟದಲ್ಲಿ ಇಂತಹದೊಂದು "ಗಮನಕ್ಕೆ..!" ಎಂಬ ಕೆಂಪು ಅಕ್ಷರಗಳ ನೋಟಿಸ್ ಹಾಕಬೇಕಾದ ಸನ್ನಿವೇಶ ಏಕೆ ಬಂತು? ಇದನ್ನು ಓದುಗರು, ನೋಡುಗರು ಅರ್ಥ ಮಾಡಿಕೊಳ್ಳುತ್ತಾರಾ? ಈ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುವಂತೆ ಒಂದಷ್ಟು ವಿಚಾರಗಳನ್ನು ಬು...