Bangalore, ಮೇ 18 -- ಥಗ್‌ ಲೈಫ್‌ ಟ್ರೈಲರ್‌ ವಿಮರ್ಶೆ: ಕಮಲ್‌ ಹಾಸನ್‌, ಸಿಂಬರಸನ್‌ ನಟನೆಯ ಥಗ್‌ ಲೈಫ್‌ ಸಿನಿಮಾ ನೋಡಿದ ಪ್ರೇಕ್ಷಕರು ವೈವಿಧ್ಯಮಯವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರ ಪ್ರಕಾರ ಇದು ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ಗಳಲ್ಲಿಯೇ ಅತ್ಯದ್ಭುತವಾದದ್ದು. ಇನ್ನು ಕೆಲವರು ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಟ್ರೈಲರ್‌ ನೋಡಿದಾಗ ಯಾವುದೋ ಹಾಲಿವುಡ್‌ ಸಿನಿಮಾದ ಟ್ರೈಲರ್‌ ನೋಡಿದಂತಹ ಫೀಲ್‌ ಆದರೆ ಅಚ್ಚರಿಯಿಲ್ಲ.

ಥಗ್ ಲೈಫ್ ಟ್ರೇಲರ್ ಒಂದು ಹಾಲಿವುಡ್ ಸಿನಿಮಾದಂತೆ ಭಾಸವಾಗುತ್ತದೆ. ಟ್ರೈಲರ್‌ನಲ್ಲಿ ಅದ್ಭುತ ದೃಶ್ಯಗಳು ಇವೆ. ವದಂತಿಯ ಕಾರಣದಿಂದ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತು ಎನ್ನುವದನ್ನು ಟ್ರೈಲರ್‌ ದೃಢಪಡಿಸಿದೆ.

ಪುಟ್ಟ ಬಾಲಕನ ಜತೆ ಕಮಲಹಾಸನ್‌ ಮಾತು ಆರಂಭದಲ್ಲಿದೆ. "ನಾನು ನಿನ್ನನ್ನು ಕಾಪಾಡುವೆ, ನೀನು ನನ್ನನ್ನು ಕಾಪಾಡು, ಇನ್ಮುಂದೆ ನಾವಿಬ್ಬರು ಒಂದೇ" ಎಂದು ಕಮಲ್‌ ಹಾಸನ್‌ ಹೇಳುತ್ತಾರೆ. ತಂದೆ ಮತ್ತು ಮಗನ ಸಂಬಂಧದ ಭಾವನಾತ್ಮಕ ಹಿನ್ನೆಲೆಯೂ ಈ ಸಿನಿಮಾದಲ್ಲ...