ಭಾರತ, ಏಪ್ರಿಲ್ 16 -- ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಜೆ ಆಚಾರ್‌ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸುಂದರವಾದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ಪುಳಕಿತಗೊಳಿಸುತ್ತಾರೆ. ಇವರು ಆರಂಭದಲ್ಲಿ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುವಾಗ ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ಗಳ ದಾಳಿಗಳನ್ನು ಎದುರಿಸಿದರು. ಕೆಟ್ಟ ಕಾಮೆಂಟ್‌ಗಳಿಗೆ ದಿಟ್ಟವಾಗಿ ಉತ್ತರಿಸುತ್ತಿದ್ದರು. ಕೆಟ್ಟ ಕಾಮೆಂಟ್‌ಗಳು ಅತಿಯಾದ ಸಂದರ್ಭಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಆಪ್ತರನ್ನು ಹೊರತುಪಡಿಸಿ ಉಳಿದವರಿಗೆ ಕಾಮೆಂಟ್‌ ಆಫ್‌ ಮಾಡಿದ್ದರು. ಇದೀಗ ಚೈತ್ರಾ ಜೆ ಆಚಾರ್‌ ಗ್ರಾಮೀಣ ಹಿನ್ನೆಲೆಯಲ್ಲಿ ಒಂದಿಷ್ಟು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಅವಳು ಕಾಡ್ಗಿಚ್ಚು ಬಳಿಕವು ಬೆಳೆಯುವ ಹೂವು" ಎಂಬ ನುಡಿಮುತ್ತನ್ನು ತನ್ನ ಫೋಟೋಗಳ ಜತೆ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಚೈತ್ರಾ ಜೆ ಆಚಾರ್‌ ಈಗ ಎರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳಲ್ಲಿ ಒಂದು ಸಿನಿ...