ಭಾರತ, ಏಪ್ರಿಲ್ 13 -- ಗಾಯಕಿ ಸೋನು ಕಕ್ಕರ್ ತಮ್ಮ ಟೋನಿ ಕಕ್ಕರ್‌ ಹಾಗೂ ತಂಗಿ ನೇಹಾ ಕಕ್ಕರ್ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಶನಿವಾರ ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಆದರೆ ಕೆಲ ಹೊತ್ತಿಗೆ ಆ ಪೋಸ್ಟ್ ಅನ್ನು ಡಿಲಿಟ್ ಕೂಡ ಮಾಡಿದ್ದಾರೆ. ಆದರೆ ಅವರ ಪೋಸ್ಟ್‌ನ ಸ್ಕ್ರೀನ್ ಶಾಟ್ ಈಗ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಕಕ್ಕರ್ ಕುಟುಂಬದಲ್ಲಿ ಏನಾಗ್ತಿದೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರ ಸುಳ್ಳೋ, ಸತ್ಯವೋ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಎಕ್ಸ್‌ನಲ್ಲಿ ಸೋನು ಕಕ್ಕರ್ ಪೋಸ್ಟ್ ಹಾಕಿದ್ದು, ಈ ರೀತಿ ಬರೆದುಕೊಂಡಿದ್ದರು. ಖ್ಯಾತ ಗಾಯಕರು ಹಾಗೂ ಸೂಪರ್‌ಸ್ಟಾರ್‌ಗಳಾದ ಟೋನಿ ಕಕ್ಕರ್ ಹಾಗೂ ನೇಹಾ ಕಕ್ಕರ್‌ ನನಗೆ ಇನ್ನು ಮುಂದೆ ಸಹೋದರಿ, ಸಹೋದರಿಯರಲ್ಲ ಎಂದು ತಿಳಿಸಲು ನನಗೆ ಬಹಳ ನೋವಾಗುತ್ತಿದೆ. ನಾನು ಅವರೊಂದಿಗಿನ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ. ಈ ನಿರ್ಧಾರವನ್ನು ನಾನು ಬಹಳ ನೋವಿನಿಂದ ತೆಗೆದುಕೊಂಡಿದ್ದೇನೆ. ನನಗೆ ಇಂದು ನಿಜವಾಗಿಯೂ ನಿರಾಶೆ ಕಾಡು...