ಭಾರತ, ಮಾರ್ಚ್ 29 -- ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳಿಗೆ ಕೆಲವು ಕೆ-ಡ್ರಾಮಾಗಳ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ವರು ಇತ್ತೀಚೆಗೆ ಲವ್ ಸ್ಕೌಟ್ ಮತ್ತು ದಿ ಫಸ್ಟ್ ಫ್ರಾಸ್ಟ್ ವೀಕ್ಷಿಸಿದ್ದಾರಂತೆ. ಪ್ರಸ್ತುತ ಅಂಡರ್‌ಕವರ್ ಹೈಸ್ಕೂಲ್ ವೀಕ್ಷಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಲವು ಹೊಸ ಸಿನಿಮಾಗಳು ಹಾಗೂ ಪ್ರಚಾರ ಕಾರ್ಯಕ್ರಮಗಳಲ್ಲಿ ಸದಾ ಭಾಗಿಯಾಗಿರುವ ರಶ್ಮಿಕಾ ಮಂದಣ್ಣ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದರೊಟ್ಟಿಗೆ ತಾವು ಯಾವ ಕೋರಿಯನ್ ಡ್ರಾಮಾಗಳನ್ನು ವೀಕ್ಷಿಸುತ್ತಾರೆ ಎಂಬ ಮಾಹಿತಿಯನ್ನೂ ಸಹ ಹಂಚಿಕೊಂಡಿದ್ದಾರೆ. ಸಾಕಷ್ಟು ಜನ ಕೆ-ಡ್ರಾಮಾಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಆ ಕಾರಣ ರಶ್ಮಿಕಾ ಮಂದಣ್ಣ ಯಾವ ಕೆ ಡ್ರಾಮಾಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳಲು ಸಹ ಕಾತರರಾಗಿದ್ದಾರೆ.

ರಶ್ಮಿಕಾ ಕೊರಿಯನ್ ಮತ್ತು ಚೈನೀಸ್ ಡ್ರಾಮಾ ಸಿರೀಸ್‌ಗಳನ್ನು ವೀಕ್ಷಿಸುತ್ತಾರಂತೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಮಾ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ನಟಿಯನ್ನು ಕೆಲವು ಉ...