ಭಾರತ, ಮಾರ್ಚ್ 14 -- ಅಫ್ಘಾನಿಸ್ತಾನದ ರಾಷ್ಟ್ರೀಯ ತಂಡದ ಎಡಗೈ ಬ್ಯಾಟ್ಸ್‌ಮನ್ ಹಜರತುಲ್ಲಾ ಜಜೈ ಅವರ ಎರಡು ವರ್ಷದ ಪುತ್ರಿ ನಿಧನರಾಗಿದ್ದಾರೆ. ಕ್ರಿಕೆಟಿಗನ ಮಗಳ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದಾಗ್ಯೂ, ಸಾವಿಗೆ ಕಾರಣ ಏನೇ ಇರಲಿ, ಈ ಘಟನೆಯು ಅಫ್ಘಾನಿಸ್ತಾನ ಕ್ರಿಕೆಟ್ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.

ಅಫ್ಘಾನ್ ರಾಷ್ಟ್ರೀಯ ತಂಡದ ಕ್ರಿಕೆಟಿಗ ಮತ್ತು ಜಜೈ ಅವರ ಆಪ್ತ ಸ್ನೇಹಿತ ಕರೀಮ್ ಜನತ್ ಈ ದುಃಖದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಇನ್​ಸ್ಟಾಗ್ರಾಂನಲ್ಲಿ ಹೀಗೆ ಬರೆದಿದ್ದಾರೆ, 'ನನ್ನ ಸಹೋದರ, ಆಪ್ತ ಸ್ನೇಹಿತ ಹಜರತುಲ್ಲಾ ಜಜೈ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ ಎಂದು ಘೋಷಿಸಲು ನನಗೆ ತುಂಬಾ ದುಃಖವಾಗಿದೆ' ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

'ನನ್ನ ಹೃದಯ ನಿಜವಾಗಿಯೂ ಭಾರವಾಗಿದೆ. ಕಷ್ಟದ ಸಮಯದಲ್ಲಿ ನನ್ನ ಸ್ನೇಹಿತ ಮತ್ತು ಅವರ ಕುಟುಂಬದೊಂದಿಗೆ ನಿಲ್ಲುತ್ತೇನೆ. ಈ ದುರಂತ ನೋವಿನಲ್ಲಿ ನರಳುತ್ತಿರುವ ಅವರಿಗಾಗಿ ದಯವಿಟ...