ಭಾರತ, ಫೆಬ್ರವರಿ 21 -- ಕಲಬುರಗಿ: ಕರ್ನಾಟಕದಲ್ಲಿ ವಿದ್ಯುತ್ ಕಡಿತ, ಲೋಡ್‌ ಶೆಡ್ಡಿಂಗ್‌, ಪವರ್‌ ಕಟ್ ವಿಚಾರಗಳು ಪದೇಪದೆ ಗಮನಸೆಳೆಯುತ್ತಿವೆ. ಈ ನಡುವೆ, ಓವರ್ ಲೋಡ್ ಕಾರಣ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವ ವಿದ್ಯುತ್ ಸರಬರಾಜು ಕಂಪನಿಗಳ ನಡೆಯನ್ನು ಖಂಡಿಸಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಕಲಬರುಗಿ ಜಿಲ್ಲೆ ಅಫಜಲಪುರದಲ್ಲಿ ರೈತರು ತಮ್ಮ ಸಂಕಟ್ಟವನ್ನು ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ವಿನೂತನ ಪ್ರತಿಭಟನೆ ನಡೆಸಿ ಗಮನಸೆಳೆದರು.

ಅಫಜಲಪುರ ತಾಲೂಕು ಗೊಬ್ಬೂರ (ಬಿ) ಗ್ರಾಮಕ್ಕೆ ರಾತ್ರಿ ವೇಳೆ ಕರೆಂಟ್ ನೀಡಲಾಗುತ್ತಿದ್ದು, ಹಗಲು ಹೊತ್ತು ವಿದ್ಯುತ್ ಪೂರೈಕೆ ಇರಲ್ಲ. ಇದನ್ನು ಖಂಡಿಸಿ, ಗ್ರಾಮದ ರೈತರು ಗುರುವಾರ (ಫೆ 20) ಹೊಲದಲ್ಲಿದ್ದ ಮೊಸಳೆಯನ್ನು ಹಿಡಿದ ರೈತರು ಅದನ್ನು ಜೆಸ್ಕಾಂ ಕಚೇರಿ ಎದುರು ತಂದಿಟ್ಟು ಪ್ರತಿಭಟನೆ ನಡೆಸಿದರು.

ಹಗಲು ಹೊತ್ತು ವಿದ್ಯುತ್ ಪೂರೈಕೆ ಮಾಡಿ, ರಾತ್ರಿ ಬೇಕಾಗಿಲ್ಲ ಎಂದು ಹೇಳುವುದಕ್ಕೆ ಕಾರಣ ಏನು ಎಂಬುದನ್ನು ವಿವರಿ...