Bengaluru, ಮಾರ್ಚ್ 19 -- ಸ್ಯಾಂಡಲ್‌ವುಡ್‌ನ ಜನಪ್ರಿಯ ಅವಳಿ ಸಹೋದರಿಯರಾದ ನಟಿ ಅಶ್ವಿತಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ವರ್ಷದ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡರು. ತಂದೆಯ ಸಾವಿನ ದಿನ ಅಪ್ಪನ ಆತ್ಮವನ್ನು ಮನೆಯಲ್ಲಿಯೇ ನೋಡಿರುವ ಬಗ್ಗೆ ಇದೀಗ ಅಚ್ಚರಿಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ ಅವಳಿ ಸಹೋದರಿಯರು, ಅಪ್ಪ ಸತ್ತ ದಿನ ನಡೆದ ಒಂದಷ್ಟು ಅಚ್ಚರಿಗಳನ್ನು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡುವ ನಟಿ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ, "ಅಪ್ಪ ತೀರಿಕೊಂಡ ದಿನ ನಾವು ಅವರ ಆತ್ಮವನ್ನು ನೋಡಿದ್ವಿ. ಅಪ್ಪ ಸತ್ತಾಗ ಅವರ ಫೇವರೇಟ್‌ ಕುರ್ಚಿ ಇತ್ತು. ಮನೆಯಲ್ಲಿ ಅದರಲ್ಲಿಯೇ ಅಪ್ಪನನ್ನು ಕೂರಿಸಿದ್ವಿ. ಅಪ್ಪನ ಅಂತ್ಯ ಸಂಸ್ಕಾರ ಮುಗಿದ ಮೇಲೆ ಆ ಚೇರ್‌ ಅನ್ನು ಯಾರೋ ಅಡುಗೆ ಮನೆಯ ಒಳಗಡೆ ಇಟ್ಟು ಬಿಟ್ಟಿದ್ದರು. ರಾತ್ರಿ ನಾವು ಹೀಗೆ ಸೋಫಾ ಮೇಲೆ ಕೂತುಕೊಂಡಿದ್ದಾಗ, ಯಾರೋ ಕಿಚನ್‌ ಒಳಗೆ ಹೋದಂತೆ ಆಯ್ತು. ಅಷ್ಟಕ್ಕೂ ಅದು ನಮ್ಮ ಅಪ್ಪನೇ. ಅವರು ಸತ್ತಾಗ ...