ಭಾರತ, ಏಪ್ರಿಲ್ 24 -- ಹೌದು, ನಾವಿಲ್ಲಿ ಹೇಳುತ್ತಿರುವುದು ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಸುಬ್ಬು ಬಗ್ಗೆ. ಅಂದರೆ ಸುಬ್ಬು ಪಾತ್ರಧಾರಿ ಅಮೋಘ್‌ ಆದಿತ್ಯ ಬಗ್ಗೆ. ಇಂದು (ಏಪ್ರಿಲ್‌ 24) ಇದೇ ಅಮೋಘ್‌ ತಮ್ಮ ಬರ್ತ್‌ಡೇ ಖುಷಿಯಲ್ಲಿದ್ದಾರೆ.

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ ನಟ ಅಮೋಘ್‌ ಆದಿತ್ಯ. ಟಿಪಿಕಲ್‌ ಮಿಡಲ್‌ ಕ್ಲಾಸ್‌ನಿಂದ ಬಂದ ಈ ಹುಡುಗ ಈಗ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.

ತಮ್ಮ ನಟನೆ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ನಟ. ಅದರಲ್ಲೂ ಮಹಿಳಾ ಅಭಿಮಾನಿಗಳೇ ಹೆಚ್ಚು.

ಸದ್ಯ ಕನ್ನಡ ಕಿರುತೆರೆಯ ಸೆನ್ಸೆಷನ್‌ ಆಗಿರುವ ಅಮೋಘ್‌ ಆದಿತ್ಯ, ಈ ಹಂತಕ್ಕೆ ಬರುವುದಕ್ಕೂ ಮುನ್ನ, ಸಾಕಷ್ಟು ಏಳುಬೀಳುಗಳ ಜತೆಗೆ ಅವಮಾನಗಳನ್ನೂ ಎದುರಿಸಿದ್ದಾರೆ.

ನಟನೆಗೆ ಬರುವುದಕ್ಕೂ ಮುನ್ನ ಸಿನಿಮಾಗಳ ಡೈರೆಕ್ಷನ್‌ ಟೀಮ್‌ನಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ ಅಮೋಘ. ರಂಗಭೂಮಿಯಲ್ಲಿಯೂ ಅಮೋಘ್‌ ಗುರುತಿಸಿಕೊಂಡಿದ...