ಭಾರತ, ಫೆಬ್ರವರಿ 13 -- ಯುಟ್ಯೂಬ್‌ನಲ್ಲಿ ಜನಪ್ರಿಯರಾಗಿರುವ ಕಂಟೆಂಟ್ ಕ್ರಿಯೆಟರ್ ರಣವೀರ್ ಅಲಹಾದಾಬಾದಿಯಾ ಅವರು ತಾಯಿ-ತಂದೆಯ ಲೈಂಗಿಕ ಕ್ರಿಯೆಯ ಬಗ್ಗೆ ಡಾರ್ಕ್ ಮತ್ತು ಡರ್ಟಿ ಕಾಮಿಡಿ (ಕರಾಳ ಮತ್ತು ಕೆಟ್ಟ ಹಾಸ್ಯ) ಮಾಡಿದ್ದು ವಿವಾದಕ್ಕೀಡಾಯಿತು. ಇದು ಈಗಲೂ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಲೇ ಇದೆ. ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಈ ವಿಷಯವೂ ಹಳಸಾಗಿಬಿಡಬಹುದು. ನನಗೆ ಈ ಮಾತುಗಳನ್ನಾಡಿದ ರಣವೀರ್‌ಗಿಂತ ಅವನ ಮಾತಿಗೆ ಚಪ್ಪಾಳೆ ಚಟ್ಟಿದ ಪ್ರೇಕ್ಷಕರ ಬಗ್ಗೆಯೂ ಕುತೂಹಲ ಹೆಚ್ಚಾಯಿತು. ನನ್ನಲ್ಲಿ ಒಂದೆರೆಡು ಕುತೂಹಲಕಾರಿ ಪ್ರಶ್ನೆಯನ್ನೂ ಹುಟ್ಟುಹಾಕಿತು.

'ಒಂದು ತಮಾಷೆಯು ನೈತಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ದಾಟಿದರೂ ಜನರು ಅದನ್ನು ಏಕೆ ಆನಂದಿಸುತ್ತಾರೆ? ಪ್ರೋತ್ಸಾಹಿಸುತ್ತಾರೆ' -ಇದು ನನ್ನ ಪ್ರಶ್ನೆಯೂ ಹೌದಾದರೂ, ಮೂಲದಲ್ಲಿ ಈ ಪ್ರಶ್ನೆ ಕೇಳಿದವರು ತತ್ವಜ್ಞಾನಿ ಅರಿಸ್ಟಾಟಲ್. ಹಾಸ್ಯವು ನಾವು ಅನುಭವಿಸಿದ ಆಘಾತ ಅಥವಾ ದುರಂತದಿಂದ ಉಂಟಾದ ನಕಾರಾತ್ಮಕ ಭಾವನೆಗಳನ್ನು ಬಿಡುಗಡೆ ಮಾಡುವ ಒಂದು ಮಾರ್ಗ ಎನ್ನುವುದು ಲಭ್...