ಭಾರತ, ಫೆಬ್ರವರಿ 26 -- Ashwini Punneth Rajkumar: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಮೂರು ವರ್ಷಗಳ ಮೇಲಾಗಿದೆ. ಇಂದಿಗೂ ಅವರ ಸಿನಿಮಾ, ಹಾಡುಗಳು, ಡೈಲಾಗ್‌ಗಳ ಮೂಲಕವೇ ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಪ್ರತಿ ಮನ ಮನೆಗಳಲ್ಲಿಯೂ ಫೋಟೋ ರೂಪದಲ್ಲಿ ನೆಲೆಸಿದ್ದಾರೆ. ಈ ನಡುವೆ ಅಪ್ಪು ಅವರ ಹೆಸರನ್ನು ಮುಂದಿನ ಪೀಳಿಗೆಗೂ ದಾಟಿಸಿಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ, ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌. ಸಿದ್ಧಗಂಗಾ ಮಠದಲ್ಲಿ ಪುನೀತ್‌ ಹೆಸರಲ್ಲಿ ಚಾರಿಟಬಲ್‌ ಟ್ರಸ್ಟ್‌ ತೆರೆದಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌, ಬದುಕಿದ್ದಾಗಲೇ ಸಾಕಷ್ಟು ಒಳ್ಳೊಳ್ಳೆಯ ಕೆಲಸ ಮಾಡಿ ಹೋದವರು. ಯಾರಿಗೂ ಕಾಣದಂತೆ, ತೆರೆಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ಇದೀಗ ಇದೇ ಕೆಲಸವನ್ನು ಅವರ ಪತ್ನಿ, ದೊಡ್ಮನೆ ಸೊಸೆ ಅಶ್ವಿನಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದರ ಮುಂದುವರಿದ ಭಾಗ ಎಂಬಂತೆ, ಮಂಗಳವಾರ (ಫೆ. 25) ಶ್ರೀ ಸಿದ್ಧಗಂಗಾ ಮಠದ ಶ್...