Bengaluru, ಮಾರ್ಚ್ 13 -- Puneeth Rajkumar Appu Movie: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ಅಪ್ಪು ಇದೇ ಮಾರ್ಚ್‌ 14ರಂದು ಮರು ಬಿಡುಗಡೆ ಆಗುತ್ತಿದೆ. 2002ರಲ್ಲಿ ತೆರೆಕಂಡಿದ್ದ ಅಪ್ಪು ಸಿನಿಮಾ, ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟ ಸೇರಿತ್ತು. ಡಾ. ರಾಜ್‌ಕುಮಾರ್‌ ಆಶೀರ್ವಾದದೊಂದಿಗೆ ವಜ್ರೇಶ್ವರಿ ಕಂಬೈನ್ಸ್‌ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈಗ ಇದೇ ಸಿನಿಮಾ 23 ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದೆ. ಈ ಬೆನ್ನಲ್ಲೇ ಇದೇ ಚಿತ್ರದ ಶತದಿನೋತ್ಸವ ಸಂಭ್ರಮದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ತೆಲುಗು ನಿರ್ದೇಶಕ ಪುರಿ ಜಗನ್ನಾಥ್‌ ಅಪ್ಪು ಚಿತ್ರದ ನಿರ್ದೇಶಕರು. ಈ ಸಿನಿಮಾ ಮೂಲಕ ನಾಯಕಿಯಾಗಿ ಚಂದನವನಕ್ಕೆ ಬಲಗಾಲಿಟ್ಟಿದ್ದರು ನಟಿ ರಕ್ಷಿತಾ. ಸಂಗೀತ ನಿರ್ದೇಶಕ ಗುರುಕಿರಣ್‌ ಅವರ ಹಾಡುಗಳು ಸಖತ್‌ ಸದ್ದು ಮಾಡಿದ್ದವು. ಡಾನ್ಸ್‌ ಮೂಲಕ ಮಾತ್ರವಲ್ಲದೆ, ಸಾಹಸ ದೃಶ್ಯಗಳಿಂದಲೂ ಅಪ್ಪು ತೆರೆಮೇಲೆ ಮಿಂಚು ಹರಿಸಿದ್ದರು. ...