Bengaluru, ಮಾರ್ಚ್ 14 -- Puneeth Rajkumar Appu Movie Re Released: ಕರ್ನಾಟಕ ರತ್ನ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ಅಪ್ಪು ಇಂದು ( ಮಾರ್ಚ್‌ 14) ರಾಜ್ಯಾದ್ಯಂತ ಮರು ಬಿಡುಗಡೆ ಆಗಿದೆ. 2002ರಲ್ಲಿ ತೆರೆಕಂಡಿದ್ದ ಅಪ್ಪು ಸಿನಿಮಾ ಮೂಲಕ ಹೀರೋ ಆಗಿ ಬಣ್ಣದ ಲೋಕಕ್ಕೆ ಬಂದಿದ್ದ ಪುನೀತ್‌ ರಾಜ್‌ಕುಮಾರ್‌, ಮೊದಲ ಸಿನಿಮಾ ಮೂಲಕ ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟ ಪಡೆದಿದ್ದರು. ಇದೀಗ 23 ವರ್ಷಗಳ ಬಳಿಕ ಈ ಸಿನಿಮಾ ಮರು ಬಿಡುಗಡೆ ಆಗಿದ್ದು, ರಾಜ್ಯಾದ್ಯಂತ ಅಂದಿನ ಕ್ರೇಜ್‌ ಮರು ಸೃಷ್ಟಿಯಾಗಿದೆ. ಅದರಲ್ಲೂ ಬೆಂಗಳೂರು ಅಪ್ಪುಮಯವಾಗಿದೆ!

ಅಣ್ಣಾವ್ರ ಆಶೀರ್ವಾದದೊಂದಿಗೆ ವಜ್ರೇಶ್ವರಿ ಕಂಬೈನ್ಸ್‌ ಬ್ಯಾನರ್‌ನಲ್ಲಿ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್‌ ಅಪ್ಪು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ತೆಲುಗು ನಿರ್ದೇಶಕ ಪುರಿ ಜಗನ್ನಾಥ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಗುರುಕಿರಣ್‌ ಸಂಗೀತ ನೀಡಿದ್ದ ಹಾಡುಗಳು ಇಂದಿಗೂ ಫೇಮಸ್‌. ನಾಯಕಿಯಾಗಿ ಚಂದನವನಕ್ಕೆ ಬಲಗಾಲಿಟ್ಟವರು ನಟಿ ರಕ್ಷಿತ...