ಭಾರತ, ಮಾರ್ಚ್ 17 -- ಹುಟ್ಟುಹಬ್ಬಕ್ಕೆ ಪುನೀತ್ ರಾಜ್​ಕುಮಾರ್ ನಾಮಸ್ಮರಣೆ,​ ಅಪ್ಪುಗೆ ನಮನ, ಕನ್ನಡ ಹಾಡುಗಳ ಕಲವರ, ಕೊಹ್ಲಿ ಕೊಹ್ಲಿ ಕೂಗು, ಎಬಿ ವಿಲಿಯರ್ಸ್ ನೆನಪು, ಹೊಸ ಆಟಗಾರರನ್ನು ಪರಿಚಯ, ಮೈದಾನದ ತುಂಬೆಲ್ಲಾ ಬಣ್ಣಬಣ್ಣಗಳ ಚಿತ್ತಾರ, ಆಟಗಾರರ ಅಭ್ಯಾಸ, ಕೊಹ್ಲಿ ತುಂಟಾಟ, ಸಂಗೀತ ಕಲಾವಿದರ ಪ್ರದರ್ಶನ, ಆರ್​ಸಿಬಿ ಆರ್​​ಸಿಬಿ ಕೂಗು... ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​ನಲ್ಲಿ!

ಆರ್​ಸಿಬಿ ನಡೆಸುತ್ತಿರುವ 3ನೇ ಅನ್​ಬಾಕ್ಸ್ ಈವೆಂಟ್ ಇದು. ಪ್ರತಿ ವರ್ಷ ಕಾರ್ಯಕ್ರಮ ಆರಂಭವಾಗುವುದೇ ಆಟಗಾರರ ಅಭ್ಯಾಸದ ಮೂಲಕ. ಅದರಂತೆ ಈ ಸಲವೂ ಚಿನ್ನಸ್ವಾಮಿಯಲ್ಲಿ ಪ್ರಾಕ್ಟೀಸ್​ನೊಂದಿಗೆ ಈವೆಂಟ್​ಗೆ ಚಾಲನೆ ಸಿಕ್ಕಿತು. ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ತುಂಟಾಟ ಜೋರಿತ್ತು. ನೆಟ್ಸ್​ನಲ್ಲಿ ಸ್ಪೆಪ್ಸ್ ಹಾಕುತ್ತಾ ನೆರೆದಿದ್ದ ಫ್ಯಾನ್ಸ್​ಗೆ ಭರ್ಜರಿ ಮನರಂಜನೆ ನೀಡಿದರು. ಫಿಲ್ ಸಾಲ್ಟ್​ ಜೊತೆಗೆ ತಮಾಷೆ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಅಭ...