ಭಾರತ, ಮಾರ್ಚ್ 9 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಭಾರತ ಕ್ರಿಕೆಟ್‌ ತಂಡದ ಕೆಲವು ಹಿರಿಯ ಆಟಗಾರರಿಗೆ ಅಂತಿಮ ಟೂರ್ನಿಯಾಗಲಿದೆಯೇ ಎಂಬ ಊಹಾಪೋಹಗಳು ಗರಿಗೆದರಿವೆ. ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರಂತಹ ಹಿರಿಯ ಆಟಗಾರರು ಸುದೀರ್ಘ ವರ್ಷಗಳಿಂದ ತಂಡದ ಪರ ಆಡುತ್ತಿದ್ದಾರೆ. ಇದೀಗ ಮುಂದಿನ ಚಾಂಪಿಯನ್ಸ್‌ ಟ್ರೋಫಿ ಆವೃತ್ತಿಯಲ್ಲಿ ಇವರು ಆಡುತ್ತಾರೋ ಎಲ್ಲವೋ ಎಂಬುದು ಅಭಿಮಾನಿಗಳಿಗೆ ಖಚಿತವಿಲ್ಲ. ಇದೇ ವೇಳೆ ಕೆಲವು ಆಟಗಾರರಿಗೆ ಇದು ಅಂತಿಮ ಏಕದಿನ ಪಂದ್ಯವಾಗುವ ಸಾಧ್ಯತೆಯೂ ಇದೆ. ಇದರಲ್ಲಿ ತಂಡದ ಪ್ರಮುಖ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ.

ಹೌದು, ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದ ಬಳಿಕ ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ. ಭಾರತ ಹಾಗೂ ನ್ಯೂಜಿಲೆಂಡ್‌ ತಂಡದ ಫೈನಲ್‌ ಪಂದ್ಯ ವೀಕ್ಷಿಸುತ್ತಿರುವ ಅಭಿಮಾನಿಗಳ ಮಧ್ಯೆ ಇಂತಹ ಅಭಿಪ್ರಾಯ ಮೂಡಿದೆ. ಜಡೇಜಾ ವಿದಾಯ ಕುರಿತಂತೆ ಯಾವುದೇ ಆಟಗಾರ ಅಥವಾ ತಂಡದಿಂದ ಅಧಿಕೃತ ಮಾ...